-->

ವಿವಾಹಪೂರ್ವ ಲೈಂಗಿಕ ಸಂಪರ್ಕದಿಂದ ಹುಟ್ಟಿದ ಶಿಶು: ಕಿಟಕಿಯಿಂದ ಎಸೆದ ಕೊಂದ ಯುವತಿ

ವಿವಾಹಪೂರ್ವ ಲೈಂಗಿಕ ಸಂಪರ್ಕದಿಂದ ಹುಟ್ಟಿದ ಶಿಶು: ಕಿಟಕಿಯಿಂದ ಎಸೆದ ಕೊಂದ ಯುವತಿನವದೆಹಲಿ: ಮದುವೆಗೆ ಮುನ್ನವೇ ಯುವತಿಯೊಬ್ಬಳು ತಾಯಿಯಾದರೆ ಆಕೆಯನ್ನು ಸಮಾಜ ನೋಡುವ ರೀತಿಯೇ ಭಯಾನಕ. ಇದೀಗ ವಿವಾಹಪೂರ್ವ ಲೈಂಗಿಕ ಸಂಪರ್ಕದಿಂದ 20ರ ಹರೆಯದ ಯುವತಿಯೊಬ್ಬಳು ತಾಯಿಯಾದ ಬಳಿಕ ಮಾಡಿದ ಕ್ರೂರ ಕೃತ್ಯದಿಂದ ಕಂಬಿ ಎಣಿಸುವ ಸ್ಥಿತಿಗೆ ತಲುಪಿದ್ದಾಳೆ. 

ಹೌದು... ವಿವಾಹ ಪೂರ್ವ ಲೈಂಗಿಕ ಸಂಪರ್ಕದಿಂದ ಶಿಶುವಿಗೆ ಜನ್ಮ ನೀಡಿರುವ ಯುವತಿಯೊಬ್ಬಳು ಸಾಮಾಜಿಕ ಕಳಂಕಕ್ಕೆ ಹೆದರಿ ಅಪಾರ್ಟೆಂಟ್ ನ ಬಾತ್ ರೂಮ್ ಕಿಟಕಿಯಿಂದ ಮಗುವನ್ನು ಎಸೆದು ಹತ್ಯೆ ಮಾಡಿರುವ ಘಟನೆ ಪೂರ್ವ ದೆಹಲಿಯ ನ್ಯೂಅಶೋಕ್ ವಿಹಾರದಲ್ಲಿ ನಡೆದಿದೆ. ನೋಯ್ಡಾದ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಯುವತಿ, ಸೋಮವಾರ ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ಸಾಮಾಜಿಕ ಕಳಂಕಕ್ಕೆ ಬೆದರಿ ಮಗುವನ್ನು ತಾನು ವಾಸಿಸುತ್ತಿದ್ದ ಅಪಾರ್ಟೆಂಟ್ ನ ಬಾತ್ ರೂಮ್ ಕಿಟಕಿಯಿಂದ ಎಸೆದಿದ್ದಾಳೆ.

ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿರುವ ಶಿಶುವನ್ನು ಕಂಡು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಶಿಶು ಮೃತಪಟ್ಟಿದೆ. ಬಳಿಕ ಶಿಶು ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ ಪೊಲೀಸ್ ಉಪ ಆಯುಕ್ತ (ಪೂರ್ವ) ಅಮೃತ ಗುಗುಲೋತ್, ರಕ್ತದ ಕಲೆಗಳ ಜಾಡು ಹಿಡಿದು ಆರೋಪಿ ಯುವತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ತನಿಖೆಯ ವೇಳೆ 'ತಾನು ಅವಿವಾಹಿತೆಯಾಗಿದ್ದರಿಂದ ಸಾಮಾಜಿಕ ಕಳಂಕಕ್ಕೆ ಹೆದರಿ ಶಿಶುವನ್ನು ಬಾತ್ ರೂಂ ಕಿಟಕಿಯಿಂದ ಎಸೆದಿದ್ದಾಗಿ' ಒಪ್ಪಿಕೊಂಡಿದ್ದಾಳೆ. ಯುವತಿ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ), 201 (ಅಪರಾಧದ ಸಾಕ್ಷಿಗಳನ್ನು ಮರೆಮಾಚುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Ads on article

Advertise in articles 1

advertising articles 2

Advertise under the article