-->
1000938341
ಫೇಸ್‌ಬುಕ್‌ ಗೆಳೆಯನೊಂದಿಗೆ ಸೇರಿ ಪತಿಯನ್ನೇ ಹತ್ಯೆಗೈದ ಹಂತಕಿ ಪತ್ನಿ...!

ಫೇಸ್‌ಬುಕ್‌ ಗೆಳೆಯನೊಂದಿಗೆ ಸೇರಿ ಪತಿಯನ್ನೇ ಹತ್ಯೆಗೈದ ಹಂತಕಿ ಪತ್ನಿ...!


ಉತ್ತರ ಪ್ರದೇಶ: ಆಕೆಗೆ ವಿವಾಹವಾಗಿತ್ತು. ಆದರೂ ಫೇಸ್ ಬುಕ್‌ನಲ್ಲಿ ಯುವಕನೊಬ್ಬನ‌ ಪ್ರೀತಿಯ ಬಲೆಗೆ ಬಿದ್ದಿದ್ದಳು. ಇವರ ಲವ್ವಿ-ಡವ್ವಿ ವಿಚಾರ ಪತಿಗೆ ತಿಳಿದು ಕಲಹ ಉಂಟಾಗಿದೆ. ಇದರಿಂದ ಸಿಟ್ಟಿಗೆದ್ದ ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಮುಗಿಸಿಬಿಟ್ಟ ಘಟನೆ ಉತ್ತರ ಪ್ರದೇಶದ ರಾಯ್‌ಬರೇಲಿ ಜಿಲ್ಲೆಯ ಕಂದಾರ್ ಪುರ್ ಗ್ರಾಮದಲ್ಲಿ ನಡೆದಿದೆ.

ಅನೂಜ್ ಪಟೇಲ್(20) ಹಾಗೂ ಆರತಿ(24) ಕೊಲೆ ಆರೋಪಿಗಳು. ರೋಹಿತ್ ಕುಮಾರ್(26) ಹತ್ಯೆಯಾದ ದುರ್ದೈವಿ.

ಮದುವೆಯಾಗಿದ್ದ ಆರತಿ ಫೇಸ್‌ಬುಕ್‌ ಗೆಳೆಯ ಅನೂಜ್ ಪಟೇಲ್ ಎಂಬಾತನ ಪ್ರೀತಿಯ ಬಲೆಗೆ ಬಿದ್ದಿದ್ದಳು. ಈ ವಿಚಾರ ಪತಿ ರೋಹಿತ್ ಕುಮಾರ್ ಗೊತ್ತಾಗಿದೆ. ಪರಿಣಾಮ ಪತ್ನಿ ಆರತಿ ಹಾಗೂ ಪತಿ ರೋಹಿತ್ ಕುಮಾರ್ ನಡುವೆ ಕಲಹಕ್ಕೂ ಕಾರಣವಾಗಿದೆ. ಇದರಿಂದ ಸಿಟ್ಟಿಗೆದ್ದ ಪತ್ನಿ, ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿದ್ದಾಳೆ. 

ಪತಿಯನ್ನು ಕೊಲೆಗೈದ ಬಳಿಕ ಯಾರಿಗೂ ಅನುಮಾನ ಬಾರದಂತೆ ಮೃತದೇಹವನ್ನು ಮನೆಯಿಂದ ಅನತಿ ದೂರದಲ್ಲಿರುವ ನಿರ್ಜನ ಪ್ರದೇಶದಲ್ಲಿ ಎಸೆದು ಬಂದಿದ್ದಾರೆ. ನಿರ್ಜನ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗುತ್ತಿದ್ದಂತೆ ದಾರಿ ಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪರಿಶೀಲಿಸಿದ ಪೊಲೀಸರು ಮೃತದೇಹದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಈ ವೇಳೆ ಪತ್ನಿ ಆರತಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವುದು ಗೊತ್ತಾಗಿದೆ. ತಕ್ಷಣ ಹೆಚ್ಚಿನ ವಿಚಾರಣೆ ನಡೆಸಿ, ಆಕೆಯ ಫೇಸ್ ಬುಕ್ ಪ್ರಿಯಕರ ಅನೂಜ್ ಪಟೇಲ್ ಹಾಗೂ ಆತನ ಸ್ನೇಹಿತ ವಿವೇಕ್ ಕುಮಾರ್(19) ಎಂಬಾತನನ್ನು ಬಂಧಿಸಿದ್ದಾರೆ.

ಸದ್ಯ ಬಂಧನವಾಗಿರುವ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302, 201, 34ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಜಿಲ್ಲಾ ಎಸ್‌ಪಿ ರಾಹುಲ್ ಭಾಟಿ ಮಾಹಿತಿ ನೀಡಿರುವುದು ವರದಿಯಾಗಿದೆ.

Ads on article

Advertise in articles 1

advertising articles 2

Advertise under the article