-->
ಇನ್ನು ಮುಂದೆ ಹಾಫ್ ಹೆಲ್ಮೆಟ್ ಧರಿಸಿದರೆ ದಂಡ ಬೀಳುವುದು ಗ್ಯಾರಂಟಿ

ಇನ್ನು ಮುಂದೆ ಹಾಫ್ ಹೆಲ್ಮೆಟ್ ಧರಿಸಿದರೆ ದಂಡ ಬೀಳುವುದು ಗ್ಯಾರಂಟಿ


ಬೆಂಗಳೂರು: ಇನ್ನು ಮುಂದೆ ದ್ವಿಚಕ್ರ ವಾಹನಗಳಲ್ಲಿ ಓಡಾಡುವವರು ಹಾಫ್ ಹೆಲ್ಮೆಟ್ ಧರಿಸಿ ಸಂಚಾರಿಸುವಂತಿಲ್ಲ ಎಂದು ಕಟ್ಟುನಿಟ್ಟು ನಿಯಮವನ್ನು ಜಾರಿಗೆ ತರಲಿದ್ದಾರೆ.

ಹಾಫ್ ಹೆಲ್ಮಟ್ ಹಾಕಿಕೊಂಡು ದ್ವಿಚಕ್ರ ಚಲಾಯಿಸಬಾರದೆಂಬ ನಿಯಮ ಜಾರಿಯಲ್ಲಿದ್ದರೂ, ಕಟ್ಟುನಿಟ್ಟಾಗಿ ಜಾರಿಗೊಂಡಂತಿರಲಿಲ್ಲ. ಇದೀಗ ಪೊಲೀಸರು ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಿದ್ದಾರೆ. ಆದ್ದರಿಂದ ಪೊಲೀಸರಿಂದ ತಪ್ಪಿಸಿಕೊಂಡರೂ ನೀವು ಕ್ಯಾಮರಾದಲ್ಲಿ ಸೆರೆಯಾಗಲಿದ್ದೀರಿ. ಇದರನ್ವಯ ಕೇಸ್ ದಾಖಲಾಗಲಿದೆ.

ಆದ್ದರಿಂದ ಇನ್ನು ಮುಂದೆ ಹಾಫ್ ಹೆಲ್ಮಟ್ ಧರಿಸಿ ದ್ವಿಚಕ್ರ ಸಂಚಾರವನ್ನು ಹೆಲ್ಮಟ್ ರಹಿತ ವಾಹನ ಚಾಲನೆ ಎಂದೇ ಪರಿಗಣಿಸಲಾಗುತ್ತದೆ. ಈ ಮೂಲಕ ಹಾಫ್ ಹೆಲ್ಮಟ್, ಕಳಪೆ ಮಟ್ಟದ ಹೆಲ್ಮಟ್‌ಗಳಿಗೆ ಬ್ರೇಕ್ ಬೀಳಲಿದೆ. ಕಳೆದ ಎರಡು ತಿಂಗಳಲ್ಲಿ 13 ಲಕ್ಷ ಪ್ರಕರಣಗಳು ದಾಖಲಾಗಿದ್ದು ಕಳೆದ ನವೆಂಬರ್‌ನಲ್ಲಿ ನಲ್ಲಿ 8 ಲಕ್ಷ ಪ್ರಕರಣ ದಾಖಲಾಗಿತ್ತು. ಡಿಸೆಂಬರ್ ನಲ್ಲಿ 5 ಲಕ್ಷ ಪ್ರಕರಣ ಬೆಳಕಿಗೆ ಬಂದಿತ್ತು. ಹೀಗೆ ಹೆಲ್ಮಟ್ ಇಲ್ಲದೇ ಅಥವಾ ಹಾಫ್ ಹೆಲ್ಮಟ್ ಧರಿಸಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚೇ ಇದೆ.

ಐಎಸ್‌ಐ ಮಾರ್ಕ್ ಇರುವ ಅಥವಾ ಕಿವಿಯನ್ನು ಸಂಪೂರ್ಣವಾಗಿ ಮುಚ್ಚುವ ಹೆಲ್ಮಟ್‌ನನ್ನು ಧರಿಸಬೇಕು. ಇಲ್ಲವಾದಲ್ಲಿ ಇದು ಟ್ರಾಫಿಕ್ ನಿಯಮಗಳ ಉಲ್ಲಂಘನೆ ಮಾಡಿದಂತೆ ಆಗುತ್ತದೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article