ಕೆ.ಎಲ್.ರಾಹುಲ್ - ಆಥಿಯಾ ಶೆಟ್ಟಿ ದಂಪತಿಗೆ ಸೆಲೆಬ್ರಿಟಿಗಳಿಂದ ಬಂದ ದುಬಾರಿ ಗಿಫ್ಟ್ ಗಳೇನು ಗೊತ್ತೇ?


ಮುಂಬೈ: ಇಂಡಿಯಾ ಟೀಂನ ಸ್ಟಾರ್ ಕ್ರಿಕೇಟಿಗ ಕೆ.ಎಲ್.ರಾಹುಲ್ ಹಾಗೂ ನಟಿ ಅಥಿಯಾ ಶೆಟ್ಟಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ವಿವಾಹದಲ್ಲಿ ಬಾಲಿವುಡ್ ನ ಸಾಕಷ್ಟು ಸೆಲೆಬ್ರಿಟಿಗಳೊಂದಿಗೆ, ಭಾರತೀಯ ಕ್ರಿಕೆಟ್ ತಂಡದ ಹಲವು ಆಟಗಾರರು ಹಾಜರಿದ್ದು ದಂಪತಿಗೆ ಶುಭಾಶಯ ಕೋರಿದ್ದಾರೆ.

ಇದೀಗ ಈ ದಂಪತಿಗೆ ಯಾರ್ಯಾರು, ಏನೇನು ಗಿಫ್ಟ್ ಗಳನ್ನು ಕೊಟ್ಟಿದ್ದಾರೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಮೂಲಗಳ ಪ್ರಕಾರ, ಈ ದಂಪತಿಗೆ ದುಬಾರಿ ಗಿಫ್ಟ್ ಗಳ ಸುರಿಮಳೆಯೇ ಸುರಿದಿದೆಯಂತೆ. ಕ್ರಿಕೆಟ್, ಸಿನಿಮಾ ಎರಡು ಕ್ಷೇತ್ರಗಳಿಂದ ಸ್ಟಾರ್ ಜೋಡಿಗೆ ಐಷಾರಾಮಿ ಉಡುಗೊರೆಗಳು ದೊರಕಿವೆ.

ಅದರಲ್ಲೂ ರಾಹುಲ್ ಮಾವ ಹಾಗೂ ಆಥಿಯಾ ಶೆಟ್ಟಿಯವರ ತಂದೆ ಸುನೀಲ್ ಶೆಟ್ಟಿ 50 ಕೋಟಿ ರೂ. ಮೌಲ್ಯದ ದುಬಾರಿ ಫ್ಲಾಟ್ ನೀಡಿ, ಹೊಸ ಜೋಡಿಗೆ ಆಶೀರ್ವಾದ ಮಾಡಿದ್ದಾರಂತೆ. ಇನ್ನು, ಬಾಲಿವುಡ್ ನಟ ಸಲ್ಮಾನ್ ಖಾನ್, ಆಥಿಯಾ‌ ಶೆಟ್ಟಿಗೆ 1.6 ಕೋಟಿ ರೂ. ಮೌಲ್ಯದ ಆಡಿ ಕಾರ್ ಗಿಫ್ಟ್ ಕೊಟ್ಟಿದ್ದಾರಂತೆ. ಜಾಕಿ ಶ್ರಾಫ್ ಹಾಗೂ ಅರ್ಜುನ್ ಕಪೂರ್ ದುಬಾರಿ ಮೌಲ್ಯದ ವಾಚ್ ಮತ್ತು ಬ್ರೇಸ್ಲೆಟ್ ಉಡುಗೊರೆಯಾಗಿ ನೀಡಿದ್ದಾರಂತೆ. ಇನ್ನು, ರಾಹುಲ್‌ಗೆ ಧೋನಿ 80 ಲಕ್ಷ ರೂ. ಮೌಲ್ಯದ ಕವಾಸಕಿ ನಿಂಜಾ ಬೈಕ್ ಗಿಫ್ಟ್ ಕೊಟ್ಟರೆ, ವಿರಾಟ್ ಕೋಹ್ಲಿ ದಂಪತಿ 2.70 ಕೋಟಿ ರೂ. ಮೊತ್ತದ ಬಿ.ಎಂ.ಡಬ್ಲ್ಯು ಕಾರ್ ಗಿಫ್ಟ್ ಮಾಡಿದ್ದಾರೆ ಎಂದ ಹೇಳಲಾಗುತ್ತಿದೆ.
BREAKING NEWS
Loading latest news...
Join our WhatsApp Channel Powered By : Online Pudu