ಇದು ವಿಶ್ವದ ಅತ್ಯಂತ ಶ್ರೀಮಂತ ಬೆಕ್ಕು...! ಅದರ ಆಸ್ತಿಯ ಮೌಲ್ಯ ಎಷ್ಟೆಂದು ತಿಳಿದರೆ ಯಾರಾದರೂ ಹುಬ್ಬೇರುವುದು ಖಂಡಿತಾ


ನವದೆಹಲಿ: ಪ್ರಪಂಚದಲ್ಲಿ ಬಹಳಷ್ಟು ಬಿಲಿಯನೇರ್‌ಗಳು ಇದ್ದಾರೆ. ಈ ಪಟ್ಟಿಯಲ್ಲಿ ಮೊದಲ 10 ಸ್ಥಾನಗಳಲ್ಲಿ ಭಾರತೀಯರೂ ಇದ್ದಾರೆ ಎಂದು ನಮಗೆ ತಿಳಿದೇ ಇದೆ. ಈ ಬಿಲಿಯೇನರ್ ಗಳ ಆಸ್ತಿ ಸಾವಿರಾರು ಕೋಟಿ ಇರುವುದು ಎಂಬುದು ನಮಗೆ ಗೊತ್ತಿದೆ. ಆದರೆ, ಬೆಕ್ಕುಗಳಿಗೂ ಕೋಟಿ ಕೋಟಿಗಟ್ಟಲೆ ಆಸ್ತಿಯಿದೆ ಎಂದರೆ ನೀವು ನಂಬುತ್ತೀರಾ?.. ಹೌದು ನಂಬಲೇಬೇಕು. ಈ ಬೆಕ್ಕುಗಳು ತಮ್ಮ ಸ್ವಂತ ಆಸ್ತಿಯನ್ನು ಗಳಿಸುತ್ತಾರೆಂಬುದು ನಿಮಗೆ ತಿಳಿದಿದೆಯೇ? ಪ್ರಪಂಚದಾದ್ಯಂತ ಕೋಟ್ಯಾಧಿಪತಿ ಬೆಕ್ಕುಗಳೂ ಇವೆ.

ಅಮೆರಿಕದ ಪಾಪ್ ಸ್ಟಾರ್ ಟೈಲರ್ ಸ್ವಿಫ್ಟ್ ರವರ ಬೆಕ್ಕು ನಮ್ಮ ನಿಮ್ಮೆಲ್ಲರಿಗಿಂತಲೂ ಶ್ರೀಮಂತವಾಗಿದೆ. ಹೊಸ ವರದಿಗಳ ಪ್ರಕಾರ ಟೈಲರ್ ಸ್ವಿಫ್ಟ್ ಅವರ ಒಲಿವಿಯಾ ಬೆನ್ಸನ್ ಎಂಬ ಬೆಕ್ಕು ವಿಶ್ವದ ಶ್ರೀಮಂತ ಸಾಕು ಪ್ರಾಣಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ರೋಲಿಂಗ್ ಸ್ಟೋನ್ಸ್ ವರದಿಯ ಪ್ರಕಾರ ಬೆಕ್ಕಿನ ಆಸ್ತಿಯ ಅಂದಾಜು ಮೌಲ್ಯ 97 ಮಿಲಿಯನ್ ಡಾಲರ್ (ಸುಮಾರು ರೂ 800 ಕೋಟಿ) ಇದೆ.

ಇದನ್ನು ಆಲ್ ಅಬೌಟ್ ಕ್ಯಾಟ್ಸ್ ಎಂಬ ವೆಬ್‌ಸೈಟ್‌ನಿಂದ ಪಟ್ಟಿಯನ್ನು ಸಂಗ್ರಹಿಸಲಾಗಿದೆ. ಇನ್‌ಸ್ಟಾಗ್ರಾಂ ಡೇಟಾವನ್ನು ಬಳಸಿಕೊಂಡು ಒಲಿವಿಯಾ ಬೆಕ್ಕಿನ ಆಸ್ತಿಯ ಮೌಲ್ಯವನ್ನು ಲೆಕ್ಕಹಾಕಿದೆ. ಆನ್‌ಲೈನ್ ಟೂಲ್, ಇನ್‌ಫ್ಲುಯೆನ್ಸ್ ಮಾರ್ಕೆಟಿಂಗ್ ಹಬ್ ಹಾಗೂ ಇನ್‌ಸ್ಟಾಗ್ರಾಂನ ಪ್ರತಿ ಪೋಸ್ಟ್‌ಗೆ ಪ್ರತಿ ಸಾಕುಪ್ರಾಣಿಗಳ ಗಳಿಕೆಯನ್ನು ಅಂದಾಜು ಮಾಡಲಾಗಿದೆ.

ಒಲಿವಿಯಾ ಇನ್‌ಸ್ಟಾಗ್ರಾಂ ಪ್ರಭಾವದ ಪ್ರಪಂಚದ ಹೊರಗೂ ತನ್ನ ಯಶಸ್ಸನ್ನು ಕಂಡುಕೊಂಡಿದೆ. ಹಲವಾರು ಸಂಗೀತ ವೀಡಿಯೋಗಳಲ್ಲಿ ತನ್ನ ಮಾಲೀಕರೊಂದಿಗೆ ನಟಿಸಿ, ತನ್ನದೇ ಆದ ವ್ಯಾಪಾರದ ಮಾರ್ಗವನ್ನು ರಚಿಸಿದೆ. ಡಯಟ್ ಕೋಕ್ ಮತ್ತು ನೆಡ್ ಸ್ಪೀಕರ್ಸ್ ಸೇರಿದಂತೆ ಅನೇಕ ದೊಡ್ಡ ಬಜೆಟ್ ಜಾಹಿರಾತುಗಳ ಒಲಿವಿಯಾ ನಟಿಸಿದೆ.