-->
ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ನಿಮ್ಮ ದೇಹಕ್ಕಾಗುವ ಪರಿಣಾಮಗಳನ್ನು ತಿಳಿದುಕೊಳ್ಳಿ..ಕಾಂತಿಯುತ ಚರ್ಮಕ್ಕಾಗಿ ಹೀಗೆ ಮಾಡಿ.!

ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ನಿಮ್ಮ ದೇಹಕ್ಕಾಗುವ ಪರಿಣಾಮಗಳನ್ನು ತಿಳಿದುಕೊಳ್ಳಿ..ಕಾಂತಿಯುತ ಚರ್ಮಕ್ಕಾಗಿ ಹೀಗೆ ಮಾಡಿ.!

ರಕ್ತದೊತ್ತಡವನ್ನು ಕಡಿಮೆ: 
ಈ ತರಕಾರಿಯಲ್ಲಿ ನೈಟ್ರೇಟ್‌ಗಳ ಹೆಚ್ಚಿನ ಸಾಂದ್ರತೆಯ ಕಾರಣದಿಂದಾಗಿ ರಕ್ತದೊತ್ತಡ-ಕಡಿಮೆಗೊಳಿಸುವಲ್ಲಿ ಸಹಕಾರಿಯಾಗುತ್ತದೆ. ಕೆಲವು ಅಧ್ಯಯನಗಳು ಬೀಟ್ರೂಟ್ ರಸವು ಸಿಸ್ಟೊಲಿಕ್ ಮತ್ತು ಡಯಾಸ್ಟೊಲಿಕ್ ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ.


ಉರಿಯೂತ ಸಮಸ್ಯೆ
ಬೀಟ್‌ರೂಟ್‌ನಲ್ಲಿ ಬೀಟೈನ್‌ ಎಂಬ ಪೌಷ್ಟಿಕಾಂಶ , ಜೀವಕೋಶಗಳು, ಪ್ರೋಟೀನ್‌ಗಳು ಮತ್ತು ಕಿಣ್ವಗಳನ್ನು ರಕ್ಷಿಸುತ್ತದೆ. ಅಲ್ಲದೆ, ಉರಿಯೂತ ಸಮಸ್ಯೆ ವಿರುದ್ಧ ಹೋರಾಡಿ ಆಂತರಿಕ ಅಂಗಗಳನ್ನು ರಕ್ಷಿಸುತ್ತದೆ. 

 ಗರ್ಭಿಣಿಯರಿಗೆ ಸಹಕಾರಿ 
 ಗರ್ಭಿಣಿಯರು ಹೆಚ್ಚು ಹೆಚ್ಚು ಬೀಟ್ ರೂಟ್ ಜೂಸ್‌ ಸೇವಿಸುವುದರಿಂದ ಮಗುವಿನ ಬೆಳವಣಿಗೆ ಸಹಕಾರಿಯಾಗುತ್ತದೆ. 

ರಕ್ತ ಸಂಚಾರ ಸುಧಾರಣೆ 
ಬೀಟ್ ರೂಟ್ ನಲ್ಲಿ ನೈಸರ್ಗಿಕ ರಾಸಾಯನಿಕವಾಗಿರುವಂತಹ ನೈಟ್ರೇಟ್ ಇದೆ. ಇದು ಪ್ರತಿಕ್ರಿಯೆಗೆ ಒಳಗಾದ ಬಳಿಕ ನೈಟ್ರಿಕ್ ಆಕ್ಸೈಡ್ ಆಗಿ ಬದಲಾಗುವುದು.

ನಿಶಕ್ತಿ ದೂರಗೊಳಿಸುವುದು
ಪ್ರತಿನಿತ್ಯವೂ ಬೀಟ್ ರೂಟ್ ಜ್ಯೂಸ್ ಕುಡಿಯುವುದರಿಂದ ದೇಹದ ಆಯಾಸವನ್ನು ದೂರ ಗೊಳಿಸುತ್ತದೆ.ಮತ್ತು ಇತರ ದೈಹಿಕ ಚಟುವಟಿಕೆ ವೇಳೆ ಆಮ್ಲಜನಕದ ಉಪಯೋಗವನ್ನು ತಗ್ಗಿಸುವ ಪರಿಣಾಮವಾಗಿ ದಣಿವು ಕಡಿಮೆ ಆಗುವುದು. 

ಕಾಂತಿಯುತ ಚರ್ಮಕ್ಕೆ ಸಹಕಾರಿ 
ಇದು ಚರ್ಮದ ಸಮಸ್ಯೆ ಮತ್ತು ನೆರಿಗೆ ವಿರುದ್ಧ ಹೋರಾಡುವುದು ಮಾತ್ರವಲ್ಲದೆ ಚರ್ಮಕ್ಕೆ ಪುನರ್ಶ್ಚೇತನ ನೀಡುವುದು. ನಿಯಮಿತವಾಗಿ ಬೀಟ್ ರೂಟ್ ಜ್ಯೂಸ್ ಕುಡಿದರೆ ಅದರಿಂದ ಆರೋಗ್ಯಕಾರಿ ಮತ್ತು ಕಾಂತಿಯುತ ಚರ್ಮ ಪಡೆಯಬಹುದು.

ಕ್ಯಾನ್ಸರ್ ಅಪಾಯ ತಗ್ಗಿಸುವುದು
ಇದರಲ್ಲಿ ಇರುವಂತಹ ವಿಟಮಿನ್ ಸಿ ಮತ್ತು ಬೆಟಾಲೈನ್ಸ್ ಅಂಶವು ಕ್ಯಾನ್ಸರ್ ಕಾರಕವಾಗಿರುವಂತಹ ಫ್ರೀ ರ್ಯಾಡಿಕಲ್ ನ್ನು ದೇಹದಿಂದ ಹೊರಗೆ ಹಾಕಲು ನೆರವಾಗುವುದು. 

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article