-->
ಏಲಕ್ಕಿಯಲ್ಲಿ 95 ಬಗೆಯ ಕ್ರಿಮಿನಾಶಕ ಪತ್ತೆ: ಅಯ್ಯಪ್ಪ ಸ್ವಾಮಿಯ ಪ್ರಸಾದ "ಅರಾವಣಂ'' ವಿತರಣೆ ಮಾಡದಂತೆ ಕೇರಳ ಹೈಕೋರ್ಟ್ ಆದೇಶ

ಏಲಕ್ಕಿಯಲ್ಲಿ 95 ಬಗೆಯ ಕ್ರಿಮಿನಾಶಕ ಪತ್ತೆ: ಅಯ್ಯಪ್ಪ ಸ್ವಾಮಿಯ ಪ್ರಸಾದ "ಅರಾವಣಂ'' ವಿತರಣೆ ಮಾಡದಂತೆ ಕೇರಳ ಹೈಕೋರ್ಟ್ ಆದೇಶ



ಕೊಚ್ಚಿ: ಏಲಕ್ಕಿಯಲ್ಲಿ ಬಹಳಷ್ಟು ಪ್ರಮಾಣದ ಕ್ರಿಮಿನಾಶಕವು ಪತ್ತೆಯಾಗಿರುವ ಹಿನ್ನೆಲೆಯಲ್ಲಿ 6.5 ಕೋಟಿ ರೂ. ಮೌಲ್ಯದ ಅಯ್ಯಪ್ಪ ಸ್ವಾಮಿಯ “ಅರಾವಣಂ” ಪ್ರಸಾದವನ್ನು ವಿತರಣೆ ಮಾಡದಂತೆ ಕೇರಳ ಹೈಕೋರ್ಟ್ ಆದೇಶಿಸಿದೆ.

ಅಯ್ಯಪ್ಪ ಸ್ವಾಮಿಯ ಅರಾವಣಂ ಪ್ರಸಾದಕ್ಕೆ ಬಳಸಿರುವ ಏಲಕ್ಕಿಯಲ್ಲಿ 95 ಬಗೆಯ ಕ್ರಿಮಿನಾಶಕಗಳಿರುವುದು ಲ್ಯಾಬ್ ಟೆಸ್ಟ್ ನಲ್ಲಿ ಖಚಿವಾಗಿದೆ. ಅರಾವಣಂನ ಆರೂವರೆ ಲಕ್ಷ ಟಿನ್‌ಗಳನ್ನು ಪೂರೈಕೆಗಾಗಿ ಸಂಗ್ರಹ ಮಾಡಲಾಗಿತ್ತು. ಆದರೆ ಕೇರಳ ಹೈಕೋರ್ಟ್ ನ ನ್ಯಾಯಮೂರ್ತಿ ಅನಿಲ್ ಕೆ. ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿಜಿ ಅಜಿತ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಅರಾವಣಂ ವಿತರಣೆಗೆ ಮಾಡದಂತೆ ಮಹತ್ವದ ನಿರ್ದೇಶನ ನೀಡಿದೆ.

ಏಳು ಟನ್ ಏಲಕ್ಕಿಯನ್ನು ಈ ಬಾರಿ 10. 9 ಲಕ್ಷ ರೂ.ಗೆ ಓಪನ್ ಟೆಂಡರ್ ಇಲ್ಲದೆ ಖರೀದಿಸಲಾಗಿದೆ. ಆದರೆ, ಇದೀಗ ಏಲಕ್ಕಿಯಿಲ್ಲದ ಅರಾವಣಂ ಉತ್ಪಾದನೆಯು ಜ.11ರ ರಾತ್ರಿಯಿಂದಲೇ ಆರಂಭವಾಗಿದೆ. ಕೇವಲ 8 ಗಂಟೆಗಳಲ್ಲಿ  ಈ ಅರಾವಣಂ ವಿತರಣೆಗೆ ಸಿದ್ಧವಾಗಲಿದೆ. ಏಲಕ್ಕಿ ರಹಿತ ಅರಾವಣಂ ಜ.12ರ ಬೆಳಗ್ಗೆಯಿಂದ ಕೌಂಟರ್‌ನಲ್ಲಿ ಲಭ್ಯವಿರುತ್ತದೆ. 2.50 ಲಕ್ಷ ಟಿನ್ ಅರಾವಣಂ ಅನ್ನು ಏಕಕಾಲದಲ್ಲಿ ತಯಾರಿಸಬಹುದು. ದಿನಕ್ಕೆ ಸರಾಸರಿ 3 ಲಕ್ಷ ಟಿನ್‌ಗಳು ಮಾರಾಟವಾಗುತ್ತವೆ. ನಿನ್ನೆ ಸಂಜೆ 5 ಗಂಟೆಯಿಂದ ಅರಾವಣಂ ಮಾರಾಟವನ್ನು ಶಬರಿಮಲೆಯಲ್ಲಿ ನಿಲ್ಲಿಸಲಾಗಿತ್ತು. ಸಾವಿರಾರು ಯಾತ್ರಿಕರು ಅರಾವಣಂ ಪಡೆಯದೆ ಹಿಂತಿರುಗಿದ್ದಾರೆ.

ಅಯ್ಯಪ್ಪ ಸ್ವಾಮಿ ದೇವಸ್ವಂ ಮಂಡಳಿಯ ಪ್ರಕಾರ, 350 ಕೆಜಿ ಅರಾವಣಂನಲ್ಲಿ ಕೇವಲ 750 ಗ್ರಾಂ ಏಲಕ್ಕಿಯನ್ನು ಬಳಸಲಾಗುತ್ತದೆ. ಅರಾವಣಂನಲ್ಲಿ ಅಕ್ಕಿ ಮತ್ತು ಬೆಲ್ಲವೂ ಇರುತ್ತದೆ. ಒಟ್ಟಾರೆ ಪದಾರ್ಥಗಳಲ್ಲಿ ಏಲಕ್ಕಿಯು ಕೇವಲ 0. 20 ರಷ್ಟು ಮಾತ್ರ ಬಳಸಿಕೊಳ್ಳಲಾಗುತ್ತದೆ. ಹೀಗಾಗಿ 200 ಡಿಗ್ರಿಗಿಂತ ಹೆಚ್ಚಿನ ತಾಪಮಾನದಲ್ಲಿ ಅರಾವಣಂ ಅನ್ನು ತಯಾರಿಸುವುದರಿಂದ ಅದು ಹಾನಿಕಾರಕವಲ್ಲ ಎನ್ನುವ ಮೂಲಕ ಮಂಡಳಿಯು ಕೋರ್ಟ್ ಗಮನ ಸೆಳೆಯಲು ಪ್ರಯತ್ನಿಸಿತು. ಆದರೆ, ನ್ಯಾಯಾಲಯವು ಮಂಡಳಿಯ ವಾದಗಳನ್ನು ಸ್ವೀಕರಿಸಲಿಲ್ಲ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉತ್ತರ ನೀಡುವುದಕ್ಕಾಗಿ ಅಫಿಡವಿಟ್ ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ಕೋರಿದ ನಂತರ ಅರ್ಜಿಯನ್ನು ಎರಡು ವಾರಗಳ ನಂತರ ಪರಿಗಣನೆಗೆ ಮುಂದೂಡಲಾಯಿತು. ಈ ಬಾರಿ ಮುಕ್ತ ಟೆಂಡರ್ ಕೈಬಿಟ್ಟು ಸ್ಥಳೀಯವಾಗಿ ಖರೀದಿ ಮಾಡಿರುವ ಕ್ರಮದ ವಿರುದ್ಧ ಮಾಜಿ ಗುತ್ತಿಗೆದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article