-->
ಜ.23 ರಂದು ನಿಧಿಲ್ಯಾಂಡ್ ಸಂಸ್ಥೆಯ ನೂತನ ಕಛೇರಿ ಉದ್ಘಾಟನೆಗೆ ಆಹ್ವಾನ

ಜ.23 ರಂದು ನಿಧಿಲ್ಯಾಂಡ್ ಸಂಸ್ಥೆಯ ನೂತನ ಕಛೇರಿ ಉದ್ಘಾಟನೆಗೆ ಆಹ್ವಾನ

 


ಮಂಗಳೂರು: ನಗರದ ಪ್ರಖ್ಯಾತ ಕಟ್ಟಡ ನಿರ್ಮಾಣ  ಸಂಸ್ಥೆ ನಿಧಿಲ್ಯಾಂಡ್ ಇದರ  ನೂತನ ಕಚೇರಿ  ಮಂಗಳೂರು, ಬಿಜೈ ಕಾಪಿಕಾಡ್ನಲ್ಲಿರುವ  ನ್ಯೂ ಬೆರ್ರಿ ಎನ್ಕ್ಲೇವ್ ಉದ್ಘಾಟನೆಗೊಳ್ಳಲಿದೆ.

 

ನೂತನ ಕಚೇರಿಯನ್ನು ಜನವರಿ 23 ರಂದು ಸೋಮವಾರ ಬೆಳಿಗ್ಗೆ 10 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಇಂಧನ ಇಲಾಖೆ ಸಚಿವರು ಮತ್ತು . . ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಉದ್ಘಾಟಿಸಲಿದ್ದಾರೆ.

 

ದೀಪ ಪ್ರಜ್ವಲನವನ್ನು ಸಂಸದರು, ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರು  ಮಾಡಲಿದ್ದಾರೆ. ಸಭಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ   ಮಂಗಳೂರು ಶಾಸಕ ಡಿ. ವೇದವ್ಯಾಸ ಕಾಮತ್, ಗೌರವ ಅತಿಥಿಗಳಾಗಿ  ಶಾಸಕರುಗಳಾದ ಭರತ್ ಶೆಟ್ಟಿ ,ವೈ,ಮಂಗಳೂರು ಉತ್ತರ, ಉಮಾನಾಥ ಕೋಟ್ಯಾನ್ ಮೂಡಬಿದ್ರೆ, ಮಂಗಳೂರು ನಗರ ಪಾಲಿಕೆ ಮಹಾ ಪೌರ ಜಯಾನಂದ ಅಂಚನ್, ಮೂಡ ಅಧ್ಯಕ್ಷ    ರವಿಶಂಕರ್ ಮಿಜಾರ್, ,ಮಾಜಿ ಸಚಿವ ಬಿ.ರಮಾನಾಥ ರೈ,  ಮಾಜಿ ಶಾಸಕ ಜೆ. ಆರ್. ಲೋಬೋ ಮತ್ತು ಕಾರ್ಪೊರೇಟರ್ ಲ್ಯಾನ್ಸ್ ಲಾಟ್ ಪಿಂಟೊ,  ಭಾಗವಹಿಸಲಿದ್ದಾರೆ.

 

ಮಂಗಳೂರು ಬ್ರಹ್ಮ ಕುಮಾರಿ ಸಂಸ್ಥೆಯ  ಮುಖ್ಯಸ್ಥರಾದ ರಾಜಯೋಗಿನಿ ಬಿ.ಕೆ. ವಿಶ್ವೇಶ್ವರಿ ಜಿ ಯವರು  ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ.  ಉದ್ಗಾಟನಾ ಸಮಾರಂಭಕ್ಕೆ  ತಾವೆಲ್ಲರೂ ಆಗಮಿಸಿ ಕಾರ್ಯಕ್ರಮದಲ್ಲಿ  ಭಾಗಿಯಾಗಬೇಕು ಎಂದು ನಿಧಿ ಲ್ಯಾಂಡ್ ಸಂಸ್ಥೆಯ  ಪರವಾಗಿ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್. ಕೆ. ಸನಿಲ್ ಮತ್ತು ಟೀಮ್ ನಿಧಿಲ್ಯಾಂಡ್  ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article