-->
ಸಾರ್ವಜನಿಕ ಪ್ರದೇಶದಲ್ಲಿ ಮೈಮಾಟ ಪ್ರದರ್ಶಿಸಿ ಎಡವಟ್ಟು: ದುಬೈ ಪೊಲೀಸರಿಂದ ಅರೆಸ್ಟ್ ಆದ ಉರ್ಫಿ ಜಾವೇದ್

ಸಾರ್ವಜನಿಕ ಪ್ರದೇಶದಲ್ಲಿ ಮೈಮಾಟ ಪ್ರದರ್ಶಿಸಿ ಎಡವಟ್ಟು: ದುಬೈ ಪೊಲೀಸರಿಂದ ಅರೆಸ್ಟ್ ಆದ ಉರ್ಫಿ ಜಾವೇದ್


ಮುಂಬೈ: ಬಾಲಿವುಡ್ ನಟಿ ಉರ್ಫಿ ಜಾವೇದ್ ಹೆಸರು ಕೇಳಿದರೆ ಸಾಕು ಆಕೆಯ ಅರೆಬರೆ ಮೈಮಾಟದ ದೇಹ ಪ್ರದರ್ಶನವೇ ಕಣ್ಣು ‌ಮುಂದೆ ಬರುತ್ತದೆ. ಯಾವಗಲೂ ಆಕೆ ಕನಿಷ್ಠ ಬಟ್ಟೆಯನ್ನು ತೊಟ್ಟುಕೊಂಡು ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುವ ಈಕೆ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅರೆಬರೆ ಬಟ್ಟೆಯಿಂದಲೇ ಫೇಮಸ್ ಆಗಿದ್ದಾಳೆ.

ಯಾವಾಗಲೂ ವಿಭಿನ್ನ ಉಡುಗೆಗಳನ್ನು ಧರಿಸಿಕೊಂಡು ತಮ್ಮ ಅರೆಬೆತ್ತಲೆ ದೇಹ ಕಾಣುವಂತೆ ಮುಂಬೈ ಬೀದಿಯಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಆಕೆಯ ಇನ್ ಸ್ಟಾಗ್ರಾಂ ಖಾತೆಯನ್ನು ತೆರೆದು ಕೋಡಿದರೆ ಅದರಲ್ಲಿ ಆಕೆಯ ಅರೆಬೆತ್ತಲೆ ಫೋಟೋಗಳ ರಾಶಿಯೇ ಇದೆ. ಇದೇ ಕಾರಣಕ್ಕೆ ಆಗಾಗ ಅವರು ಟ್ರೋಲ್ ಆಗುತ್ತಿರುತ್ತಾರೆ. ಇತ್ತೀಚೆಗಷ್ಟೇ ದುಬೈಗೆ ಭೇಟಿ ನೀಡಿರುವ ಉರ್ಫಿ ಜಾವೇದ್, ದುಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ಅದಕ್ಕೆ ಅವರ ಮೈಮಾಟ ಪ್ರದರ್ಶನವೇ ಕಾರಣ.

ಮಂಗಳವಾರ ಫ್ಯಾಶನ್ ಇನ್ಸುಯೆನ್ಸರ್ ಉರ್ಫಿ ಜಾವೇದ್ ರನ್ನು ದುಬೈ ಅಧಿಕಾರಿಗಳು ಬಂಧಿಸಿದ್ದಾರೆಂದು ಇಂಡಿಯಾ ಟುಡೆ ವರದಿ ಮಾಡಿದೆ. ಆದರೆ, ಈ ಸುದ್ದಿಯ ಬಗ್ಗೆ ಉರ್ಫಿ ಆಪ್ತ ಮೂಲಗಳಾಗಲಿ ಖಚಿತ ಮಾಹಿತಿ ನೀಡಿಲ್ಲ. ಮಾಧ್ಯಮಗಳಲ್ಲಿ ಮಾತ್ರ ಬಂಧನದ ಸುದ್ದಿ ವರದಿಯಾಗಿವೆ. ಅವರು ಎಂದಿನಂತೆ ತಮ್ಮ ಇನ್‌ಸ್ಟಾಗ್ರಾಂಗೆ ವೀಡಿಯೋ ಮಾಡಲು ಉರ್ಫಿ ಜಾವೇದ್, ಅರೆಬರೆ ಬಟ್ಟೆಯನ್ನು ತೊಟ್ಟುಕೊಂಡಿದ್ದರು. ಬಟ್ಟೆಯಿಂದ ಯಾವುದೇ ತೊಂದರೆ ಇರಲಿಲ್ಲ. ಆದರೆ, ಉರ್ಫಿ ದುಬೈನ ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಅರೆಬೆತ್ತಲೆ ದೇಹ ಪ್ರದರ್ಶನ ಮಾಡಿರುವುದರಿಂದ ಆಕೆ ಬಂಧನಕ್ಕೊಳಗಾಗಿದ್ದಾಳೆ. ಉರ್ಫಿ ವೀಡಿಯೋ ಮಾಡಲು ಹೋಗಿದ್ದ ಸ್ಥಳಗಳಲ್ಲಿ ಅಶ್ಲೀಲತೆಗೆ ಆಸ್ಪದವಿಲ್ಲ. ಹೀಗಾಗಿ ಆಕೆಯನ್ನು ದುಬೈ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಇನ್ನು ಬಿಗ್ ಬಾಸ್ ಒಟಿಟಿ ಶೋನಲ್ಲಿ ಸ್ಪರ್ಧಿಸಿದ ಬಳಿಕ ಭಾರೀ ಪ್ರಸಿದ್ಧಿಯನ್ನು ಪಡೆದಿರುವ ಉರ್ಫಿ ಜಾವೇದ್, ತಮ್ಮ ಮೈಮಾಟ ಪ್ರದರ್ಶನ ಎಲ್ಲರನ್ನೂ ಮೀರಿಸುವವರೇ. ಸದಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪಡ್ಡೆ ಹುಡುಗರ ಮೈ ಬಿಸಿಯೇರಿಸುವಂತಹ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಅವರ ಹಾಟ್ ಅವತಾರಕ್ಕೆ ಫಿದಾ ಆಗಿರುವ ಅಭಿಮಾನಿಗಳು ಪ್ರತಿದಿನ ಅವರ ಫೋಟೋ ಅಥವಾ ವೀಡಿಯೋಗಳಿಗೆ ಎದುರು ನೋಡುತ್ತಲೇ ಇರುತ್ತಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article