-->
ಒಟ್ಟೊಟ್ಟಿಗೆ ಇಬ್ಬರು ಪತ್ನಿಯರು ಬಸುರಾಗಿದ್ದಾರೆ ಎಂದ ಯೂಟ್ಯೂಬರ್ ಅನ್ನು ಟ್ರೋಲ್ ಮಾಡಿದ ಟ್ರೋಲಿಗರು

ಒಟ್ಟೊಟ್ಟಿಗೆ ಇಬ್ಬರು ಪತ್ನಿಯರು ಬಸುರಾಗಿದ್ದಾರೆ ಎಂದ ಯೂಟ್ಯೂಬರ್ ಅನ್ನು ಟ್ರೋಲ್ ಮಾಡಿದ ಟ್ರೋಲಿಗರು


ಆಂಧ್ರಪ್ರದೇಶ: ಯೂಟ್ಯೂಬರ್ ಅರ್ಮಾನ್ ಮಲಿಕ್ ಎಂಬಾತ ಇನ್ ಸ್ಟಾಗ್ರಾಂನಲ್ಲಿ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳು ಭಾರೀ ವೈರಲ್ ಆಗುತ್ತಿದೆ. ನೆಟ್ಟಿಗರು ಈ ಫೋಸ್ಟ್ ಗೆ ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಅರ್ಮಾನ್ ಮಲಿಕ್ ಹಂಚಿಕೊಂಡಿರಳದು ತಮ್ಮ ಪತ್ನಿಯರದ್ದೇ ಫೋಟೋ.

ಹೌದು, ಯೂಟ್ಯೂಬರ್ ಅರ್ಮಾನ್ ಮಲಿಕ್ ಗೆ ಪಾಯಲ್ ಮಲಿಕ್ ಹಾಗೂ ಕೃತಿಕಾ ಮಲಿಕ್ ಎಂಬ ಇಬ್ಬರು ಪತ್ನಿಯರಿದ್ದಾರೆ. ಇವರಿಬ್ಬರು ಏಕಕಾಲದಲ್ಲಿ ಗರ್ಭಿಣಿಯಾಗಿದ್ದಾರೆ ಎಂದು ಇವರು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ತನ್ನ ಸಂತಸವನ್ನು ಹಂಚಿಕೊಂಡಿದ್ದಾರೆ. ಫೋಟೋ ಪೋಸ್ಟ್ ಮಾಡಿ 'ಇದು ನನ್ನ ಕುಟುಂಬ' ಎಂಬ ಬರೆದುಕೊಂಡಿದ್ದಾರೆ.


ಆದರೆ ಅರ್ಮಾನ್ ಮಲಿಕ್ ಮಾಡಿರುವ ಪೋಸ್ಟ್ ಟ್ರೋಲಿಗರಿಗೆ ಅಸ್ತ್ರವಾದಂತಿದೆ. ಯೂಟ್ಯೂಬರ್ ಅರ್ಮಾನ್ ಮಲಿಕ್‌ನ ಇಬ್ಬರು ಪತ್ನಿಯರು ಒಟೊಟ್ಟಿಗೆ ಗರ್ಭಿಣಿಯರಾಗಿರುವ ವಿಚಾರವನ್ನು ಸಾಕಷ್ಟು ಜನರು ಇದೀಗ ಟ್ರೋಲ್ ಮಾಡುತ್ತಿದ್ದಾರೆ. ಕೆಲವರು ಮಂದಿ ಮಾತ್ರ ತಂದೆಯಾಗುತ್ತಿರುವ ಸಂತಸದಲ್ಲಿರುವ ಅರ್ಮಾನ್ ಮಲಿಕ್‌ಗೆ ಅಭಿನಂದನೆ ತಿಳಿಸುತ್ತಿದ್ದಾರೆ.

ಅರ್ಮಾನ್ ಮಲಿಕ್ 2011 ರಲ್ಲಿ ಪಾಯಲ್ ಎಂಬವರೊಂದಿಗೆ ಮೊದಲು ವಿವಾಹವಾಗಿದ್ದರು. ಇವರಿಗೆ ಈಗಾಗಲೇ ಚಿರಾಯ ಎಂಬ ಪುತ್ರನಿದ್ದಾನೆ. 2018ರಲ್ಲಿ ತನ್ನ ಪತ್ನಿ ಪಾಯಲ್ ಸ್ನೇಹಿತೆ ಕೃತಿಕಾ ಎಂಬಾಕೆಯನ್ನು ಅರ್ಮಾನ್ ಮದುವೆಯಾಗಿದ್ದ. ಇದೀಗ ಇಬ್ಬರೂ ಪತ್ನಿಯರೂ ಒಟ್ಟೊಟ್ಟಿಗೆ ಗರ್ಭಿಣಿಯರಾಗಿದ್ದಾರೆ ಎಂದು ಅರ್ಮಾನ್ ಮಲ್ಲಿಕ್ ಹೇಳಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article