-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಪ್ರೇಯಸಿಗೆ ಗೋವಾಕ್ಕೆ ಹೋಗಿ ಮೋಜು - ಮಸ್ತಿ ಮಾಡಬೇಕೆಂಬ ಬಯಕೆ : ಆಕೆಯ ಆಸೆ ಈಡೇರಿಸಲು ಪ್ರೇಮಿ ಮನೆಯಲ್ಲಿಯೇ ಮಾಡಬಾರದ್ದನ್ನು ಮಾಡಿದ

ಪ್ರೇಯಸಿಗೆ ಗೋವಾಕ್ಕೆ ಹೋಗಿ ಮೋಜು - ಮಸ್ತಿ ಮಾಡಬೇಕೆಂಬ ಬಯಕೆ : ಆಕೆಯ ಆಸೆ ಈಡೇರಿಸಲು ಪ್ರೇಮಿ ಮನೆಯಲ್ಲಿಯೇ ಮಾಡಬಾರದ್ದನ್ನು ಮಾಡಿದ


ಬೆಂಗಳೂರು: ಮಾಡೋದಕ್ಕೆ ಯಾವ ಕೆಲಸವೂ ಇಲ್ಲದಿದ್ದರೂ, ಯುವತಿಯೊಬ್ಬಳ ಪ್ರೇಮಪಾಶದಲ್ಲಿ ಬಿದ್ದಿದ್ದ. ಈ ಪ್ರಿಯತಮೆಯ ಗೋವಾ ಪ್ರವಾಸದ ಆಸೆ ಪೂರೈಸಲು ತನ್ನ ಅಣ್ಣನ ಮನೆಯಲ್ಲಿಯೇ ಮಾಡಬಾರದ್ದನ್ನು ಮಾಡಿ ಇದೀಗ ಪೊಲೀಸ್ ಅತಿಥಿಯಾಗಿದ್ದಾನೆ. 

ನಗರದ ಆಡುಗೋಡಿಯ ಮಹಾಲಿಂಗೇಶ್ವರ ಬಂಡೆ ಏರಿಯಾ ನಿವಾಸಿ ಮೊಹಮ್ಮದ್ ಇರ್ಫಾನ್ ಬಂಧಿತ ಆರೋಪಿ. ಈತ ಅಣ್ಣ ಸಲ್ಮಾನ್, ಅತ್ತಿಗೆ ಹಾಗೂ ತಾಯಿಯೊಂದಿಗೆ ವಾಸವಿದ್ದ. ಸುದ್ದುಗುಂಟೆಪಾಳ್ಯದಲ್ಲಿ ಅಪರೂಪಕ್ಕೊಮ್ಮೆ ಎಂಬಂತೆ ಸೇಲ್ಸ್‌ ಮೆನ್ ಕೆಲಸ ಆದರೂ ಆತ ಕೆಲಸವಿಲ್ಲದೆ ಅಡ್ಡಾಡುತ್ತಿದ್ದುದೇ ಹೆಚ್ಚು ಈ. ನಡುವೆ ಯುವತಿಯೊಬ್ಬಳ ಪ್ರೀತಿಯ ಬಲೆಗೆ ಬಿದ್ದಿದ್ದ. ಆತನ ಪ್ರೇಯಸಿಗೆ ಗೋವಾಗೆ ಹೋಗಿ ಮೋಜು-ಮಸ್ತಿ ಮಾಡಬೇಕೆಂಬ ಬಯಕೆಯಾಗಿತ್ತು.

ಆದರೆ, ಪ್ರೇಯಸಿಯನ್ನು ಗೋವಾಗೆ ಕರೆದೊಯ್ಯಲು ಇರ್ಫಾನ್ ಬಳಿ ಹಣ ಇರಲಿಲ್ಲ. ಆದರೂ ಪ್ರೇಯಸಿಯ ಬಯಕೆ ಈಡೇರಿಸಬೇಕೆಂದು ನಿರ್ಧಾರ ಮಾಡಿಯೇ ಬಿಟ್ಟಿದ್ದ. ಅದಕ್ಕಾಗಿ ಆತ ಮಾಡಿದ ಕೆಟ್ಟ ಕೆಲಸವೆಂದರೆ ಮನೆಯಲ್ಲೇ ಕಳವುಗೈದಿರುವುದು. ಆತ ತನ್ನ ಅಣ್ಣ-ಅತ್ತಿಗೆಗೆ ಸೇರಿದ 103 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಕದ್ದ ಚಿನ್ನಾಭರಣವನ್ನು ಅಡವಿಟ್ಟು ಪ್ರೇಯಸಿಯೊಂದಿಗೆ ಗೋವಾಕ್ಕೆ ಹೋಗಿ ಮೋಜು ಮಸ್ತಿಯಲ್ಲಿ ತೊಡಗಿದ್ದ.

ನವೆಂಬರ್ 29ರಂದು ಮನೆಯಲ್ಲಿ ಬೀರು ಪರಿಶೀಲಿಸಿದಾಗ ಚಿನ್ನಾಭರಣ ಕಳವಾಗಿರುವುದು ಮನೆಯವರಿಗೆ ಗೊತ್ತಾಗಿದೆ. ಇತ್ತ ನಾಲ್ಕೈದು ದಿನಗಳಿಂದ ಇರ್ಫಾನ್ ಮನೆಗೂ ಬಂದಿರಲಿಲ್ಲ. ಅನುಮಾನಗೊಂಡ ಅಣ್ಣ ಸಲ್ಮಾನ್ ಈ ಬಗ್ಗೆ ಪೊಲೀಸ್ ದೂರು ನೀಡಿದ್ದರು. ತನಿಖೆ ಕೈಗೊಂಡ ಆಡುಗೋಡಿ ಪೊಲೀಸರು ಈ ಕಳ್ಳತನದಲ್ಲಿ ಇರ್ಷಾದ್ ಕೈವಾಡ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಗೋವಾದಲ್ಲಿದ್ದಾಗಲೇ ಆರೋಪಿ ಇರ್ಷಾದ್ ನನ್ನು ಬಂಧಿಸಿರುವ ಪೊಲೀಸರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ