ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು. ಹಳೆಯ ರೋಗದಿಂದ ಮುಕ್ತಿ ದೊರೆಯುತ್ತದೆ. ಮತ್ತೊಂದೆಡೆ, ತುಲಾ ರಾಶಿಯವರಿಗೆ ಬಡ್ತಿ ಸಿಕ್ಕಿ ಗೌರವ ಹೆಚ್ಚಾಗುತ್ತದೆ. ಇವರು ಕೂಡಾ ಎರಡೂವರೆ ಶನಿ ದೆಸೆಯಿಂದ ಮುಕ್ತಿ ಪಡೆಯಲಿದ್ದಾರೆ. ಇನ್ನು ಸಾಡೇಸಾತಿಯಿಂದ ಪರಿಹಾರ ಪಡೆಯುವ ಧನು ರಾಶಿಯವರಿಗೆ ಧನಲಾಭದ ಸಾಧ್ಯತೆಗಳಿವೆ.
ವೃಷಭ, ತುಲಾ ಮತ್ತು ಮಕರ ರಾಶಿಯವರಿಗೆ ರಾಹು ಸಂಚಾರದಿಂದ ಲಾಭವಾಗಲಿದೆ. ವೃಷಭ ರಾಶಿಯವರು ಮಾಡುವ ಕೆಲಸಕ್ಕೆ ಸ್ನೇಹಿತರು ಮತ್ತು ಸಹೋದರರ ಸಹಾಯ ಸಿಗಲಿದೆ. ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುವವರಿಗೆ ಲಾಭವಾಗಲಿದೆ.
ರಾಹು ಸಂಕ್ರಮಣವು ತುಲಾ ರಾಶಿಯವರಿಗೆ ಅಗಾಧವಾದ ಲಾಭಗಳನ್ನು ನೀಡುತ್ತದೆ. ದೊಡ್ಡ ಉದ್ಯೋಗಾವಕಾಶ ಸಿಗಲಿದೆ. ವಿದೇಶಕ್ಕೆ ಹೋಗುವ ಕನಸು ಕೂಡ ನನಸಾಗಬಹುದು. ಮಕರ ರಾಶಿಯ ವ್ಯಾಪಾರಸ್ಥರಿಗೆ ಲಾಭವಾಗಲಿದೆ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.