-->
ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ: ಪುತ್ತೂರಿನ ವೈದ್ಯನ ವಿರುದ್ಧ ಪೊಕ್ಸೊ ಪ್ರಕರಣ ದಾಖಲು

ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ: ಪುತ್ತೂರಿನ ವೈದ್ಯನ ವಿರುದ್ಧ ಪೊಕ್ಸೊ ಪ್ರಕರಣ ದಾಖಲು



ಭಟ್ಕಳ: ಏಳರ ಬಾಲಕನಿಗೆ ತನ್ನ ನಿವಾಸದಲ್ಲಿಯೇ ಲೈಂಗಿಕ ಕಿರುಕುಳ ನೀಡಿದ್ದಾನೆಂಬ ಆರೋಪದಲ್ಲಿ ವೈದ್ಯರೊಬ್ಬರ ವಿರುದ್ಧ ಪೊಕ್ಸೊ ಕಾಯ್ದೆಯಡಿ ದೂರು ದಾಖಲಾಗಿರುವುದಾಗಿದೆ.

ಆರೋಪಿ ವೈದ್ಯ ಡಾ.ಶೈಲೇಶ್ ಎಂ.ದೇವಾಡಿಗ ಎಂದು ತಿಳಿದು ಬಂದಿದೆ‌. ಈತ ದ.ಕ.ಜಿಲ್ಲೆಯ ಪುತ್ತೂರು ಮೂಲದವನಾಗಿದ್ದಾನೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಡಿಸೆಂಬರ್ 1ರಂದು ಆರೋಪಿ ಬಾಡಿಗೆ ಮನೆಯ ಮಾಲಕರ ಪುತ್ರನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಆರೋಪಿಯು ತಮ್ಮ ನಿವಾಸದಲ್ಲಿ ಬಾಡಿಗೆಗೆ ಇದ್ದು, ತಮ್ಮ ಕುಟುಂಬದ ಸದಸ್ಯರಿಗೆಲ್ಲ ಪರಿಚಿತನಾಗಿದ್ದ ಎಂದು ಸಂತ್ರಸ್ತ ಬಾಲಕನ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಸ್ಥಳೀಯ ಸಾಮಾಜಿಕ ಮಾಧ್ಯಮಗಳಲ್ಲಿ ಶೈಲೇಶ್ ಕುರಿತು ವದಂತಿಗಳು ವಿವಿಧ ರೀತಿಯ ಹರಿದಾಡುತ್ತಿದೆ. ಶೈಲೇಶ್ ಎಂ. ದೇವಾಡಿಗ ಎಂಬ ಫಲಕ ತೂಗು ಹಾಕಿ ಅದರ ಮುಂದೆ ಎಂಡಿ ಎಂದು ಬರೆದುಕೊಂಡಿದ್ದ. ತಾನು ಎಂಡಿ ಮುಗಿಸಿರುವ ವೈದ್ಯ ಎಂದು ಬಿಂಬಿಸಿಕೊಳ್ಳುವುದು ಅದರ ಉದ್ದೇಶವಾಗಿತ್ತು ಎಂದೂ ಹೇಳಲಾಗಿದೆ. ಆದರೆ ಆತ ಆಯುರ್ವೇದ ವೈದ್ಯನಾಗಿದ್ದಾನೆ. ಹೀಗಿದ್ದೂ ಆತ ತನ್ನನ್ನು ತಾನು ಎಂಡಿ ಪೂರೈಸಿರುವ ವೈದ್ಯ ಎಂದು ಬಿಂಬಿಸಿಕೊಂಡಿದ್ದ. ಪಟ್ಟಣದಲ್ಲಿನ ಬಹುತೇಕರು ಆತ ಎಂಡಿ ಪೂರೈಸಿರುವ ವೈದ್ಯ ಎಂದೇ ನಂಬಿಕೊಂಡಿದ್ದರು. ಆದರೆ, ಅದು ಸುಳ್ಳು ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article