ಮದ್ಯ ಕುಡಿಸಿ ಬಾಲಕಿಯ ಅತ್ಯಚಾರಗೈದ ವೃದ್ಧನ ಥಳಿಸಿ ಕೊಲೆ




ಬೆಂಗಳೂರು: ಅಪ್ರಾಪ್ತೆಗೆ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ್ದಾನೆಂದು ಆರೋಪಿಸಿ ವೃದ್ಧನೊರ್ವನಿಗೆ ಹಲ್ಲೆ ನಡೆಸಿ ಕೊಲೆಗೈದಿರುವ ಘಟನೆ ಇಲ್ಲಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಬಾಬುಸಾಬ್ ಪಾಳ್ಯದ ಕುಪ್ಪಣ್ಣ(73) ಕೊಲೆಯಾದ ವೃದ್ಧ. ಸಂತ್ರಸ್ತ ಬಾಲಕಿ ಕುಟುಂಬದವರು ಕುಪ್ಪಣ್ಣನನ್ನು ಹೊಡೆದು ಕೊಂದಿದ್ದಾರೆ ಎಂದು ಹೇಳಲಾಗುತ್ತಿದೆ.‌ ಹೆಣ್ಣೂರಿನ ಬಾಬುಸಾಬ್ ಪಾಳ್ಯದಲ್ಲಿ ಹಲವು ವರ್ಷಗಳಿಂದ ತಮಿಳುನಾಡು ಮೂಲದ ಕುಪ್ಪಣ್ಣ ವಾಸವಿದ್ದ. ಈ ತನ್ನ ಮನೆಯ ಪಕ್ಕದ ಮನೆಯ ಬಾಲಕಿಯನ್ನು ತಂಪು ಪಾನೀಯ ಕೊಡುವುದಾಗಿ ಹೇಳಿ ಮನೆಗೆ ಕರೆದಿದ್ದಾನೆ. ಬಳಿಕ ಪಾನೀಯದಲ್ಲಿ ಮದ್ಯವನ್ನು ಮಿಶ್ರಣ ಮಾಡಿ ಕುಡಿಸಿದ್ದಾನೆ. ಬಾಲಕಿಗೆ ಮತ್ತೇರಿದ ಬಳಿಕ ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ ಎನ್ನಲಾಗಿದೆ.


ಘಟನೆಯ ಕುರಿತು ಪ್ರತಿಕ್ರಿಯಿಸಿದ ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್, ಬಾಲಕಿ ಮನೆಯ ಮೇಲೆ ಒಣಗಿಸಲು ಹಾಕಿದ್ದ ಬಟ್ಟೆ ತರಲು ನಿನ್ನೆ ಮಧ್ಯಾಹ್ನ ಮಹಡಿ ಮೇಲೆ ತೆರಳಿದ್ದಳು. ಈ ವೇಳೆ ಮನೆಯ ಒಳಗೆ ಬಾಲಕಿಯನ್ನು ಕರೆದ ಕುಪ್ಪಣ್ಣ ಕೃತ್ಯವೆಸಗಿರುವುದಾಗಿ ಗೊತ್ತಾಗಿದೆ ಎಂದರು.

ಕೃತ್ಯ ಎಸಗಿರುವುದು ತಿಳಿದ ಬಳಿಕ ಬಾಲಕಿ ಮನೆಯವರು ವೃದ್ಧ ಕುಪ್ಪಣ್ಣನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಮುಂಜಾನೆ ಠಾಣೆಗೆ ಬಂದು ದೂರು ನೀಡಿದ್ದಾರೆ. ಪರಿಶೀಲನೆ ನಡೆಸಲು ಮನೆಯ ಬಳಿ ಪೊಲೀಸರು ಹೋಗಿ ನೋಡಿದಾಗ ವೃದ್ಧ ಮೃತಪಟ್ಟಿದ್ದಾನೆ. ವೃದ್ಧ ಕುಪ್ಪಣ್ಣ ಗಾರೆ ಕೆಲಸ ಮಾಡಿಕೊಂಡು ಒಬ್ಬಂಟಿಯಾಗಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಹೆಣ್ಣೂರು ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದೆ. ಕುಪ್ಪಣ್ಣನ ಮೇಲೆ ಪೊಕ್ಸೊ ಪ್ರಕರಣ ದಾಖಲಾಗಿದೆ. ಅದೇ ರೀತಿ ಸಂತ್ರಸ್ತೆಯ ಮನೆಯವರ ಮೇಲೆ ಹತ್ಯೆ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu