-->
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಗೆ ಮುಳುವಾಯಿತೇ ಕಾಂತಾರ..? ಮಂಗಳೂರು ಲೋಕಸಭೆಗೆ ರಿ‍ಷಬ್ ಬಿಜೆಪಿ ಅಭ್ಯರ್ಥಿ..?

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಗೆ ಮುಳುವಾಯಿತೇ ಕಾಂತಾರ..? ಮಂಗಳೂರು ಲೋಕಸಭೆಗೆ ರಿ‍ಷಬ್ ಬಿಜೆಪಿ ಅಭ್ಯರ್ಥಿ..?

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಗೆ ಮುಳುವಾಯಿತೇ ಕಾಂತಾರ..? ಮಂಗಳೂರು ಲೋಕಸಭೆಗೆ ರಿ‍ಷಬ್ ಬಿಜೆಪಿ ಅಭ್ಯರ್ಥಿ..?


ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಮಂಗಳೂರು ಕ್ಷೇತ್ರಕ್ಕೆ ಸ್ಟಾರ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ರಾಷ್ಟ್ರೀಯ ಮುಖಂಡರು ಚಿಂತನೆ ನಡೆಸಿದೆ ಎನ್ನಲಾಗಿದೆ.ಬಿಜೆಪಿಯ ಸಂಸದ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಬಗ್ಗೆ ವ್ಯಾಪಕ ಜನಾಕ್ರೋಶ ಕೇಳಿಬಂದ ಹಿನ್ನೆಲೆಯಲ್ಲಿ ನಳಿನ್ ಅವರಿಗೆ ಸುರಕ್ಷಿತ ಕ್ಷೇತ್ರವೊಂದನ್ನು ಸಿದ್ಧಪಡಿಸಿ ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂತಾರ ಖ್ಯಾತಿಯ ಸ್ಟಾರ್ ನಟ ರಿಷಬ್ ಶೆಟ್ಟಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ತಯಾರಿ ನಡೆಸಿದೆ.ಈ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಮಾತುಕತೆ ನಡೆಸಿದ್ದು, ಬಿಜೆಪಿಯ ರಾಷ್ಟ್ರೀಯ ವರಿಷ್ಠ ಮುಖಂಡರು ರಿಶಬ್ ಜೊತೆಗೆ ಪ್ರಸ್ತಾಪ ಇಟ್ಟಿದ್ದಾರೆ ಎಂಬ ಸುದ್ದಿ ಮಾಧ್ಯಮ ವಲಯದಲ್ಲಿ ಮಿಂಚಿನಂತೆ ಹರಿದಾಡುತ್ತಿದೆ.ಉಡುಪಿ ಜಿಲ್ಲೆಯ ಪ್ರಭಾವಿ ಬಿಜೆಪಿಯ ಮುಖಂಡ ಹಾಗೂ ರಿಶಬ್ ಶೆಟ್ಟಿ ಅವರ ಪರಮಾಪ್ತರಾಗಿರುವ ಶಾಸಕರೊಬ್ಬರು ನವದೆಹಲಿಯ ಬಿಜೆಪಿ ಮುಖಂಡರಿಗೆ ಈ ಬಗ್ಗೆ ಪ್ರಸ್ತಾಪವನ್ನು ಮುಂದಿಟ್ಟಿದ್ದು, ಮೋದಿ ಮತ್ತು ಶಾ ಅವರ ಗ್ರೀನ್ ಸಿಗ್ನಲ್ ಸಿಕ್ಕರೆ ಸ್ಟಾರ್ ನಟನ ಜೊತೆಗೆ ಮಾತುಕತೆ ನಡೆಸುವ ಜವಾಬ್ದಾರಿಯನ್ನು ತಾವು ವಹಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕರೊಬ್ಬರ ಆಪ್ತ ಮೂಲಗಳು ಹೇಳಿವೆ.ಎಲ್ಲವೂ ಅಂದುಕೊಂಡಂತೆ ನಡೆದರೆ ನಳಿನ್ ಕುಮಾರ್ ಕಟೀಲ್ ಅವರಿಗೆ ಮಂಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪುವುದು ನಿಚ್ಚಳವಾಗಿದೆ. ಈ ಸ್ಥಾನಕ್ಕೆ ಉಡುಪಿ ಜಿಲ್ಲೆಯವರೇ ಆದ ವಿಶ್ವಾದ್ಯಂತ ಕಾಂತಾರ ಮೂಲಕ ಖ್ಯಾತಿ ಪಡೆದಿರುವ ರಿಶಬ್ ಸ್ಪರ್ಧೆ ನಡೆಸುವ ಸಾಧ್ಯತೆ ಇದೆ.ಈಗಾಗಲೇ ನಳಿನ್ ಅವರು ಸಂಘ ಪರಿವಾರದ ಯುವ ಸಮೂಹದ ವಿರೋಧ ಕಟ್ಟಿಕೊಂಡಿದ್ದು, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಸಂದರ್ಭದಲ್ಲಿ ನಡೆದ ಘಟನೆಗಳಿಂದ ಹಿಡಿದು ಪಂಪ್‌ವೆಲ್ ಓವರ್ ಬ್ರಿಡ್ಜ್‌, ಸುರತ್ಕಲ್ ಟೋಲ್ ಗೇಟ್ ವರೆಗೆ ನಳಿನ್ ಅಪಖ್ಯಾತಿ ಪಡೆದುಕೊಂಡಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article