-->

ಪಗಡೆಯಾಟದಲ್ಲಿ ತನ್ನನ್ನೇ ಪಣಕ್ಕಿಟ್ಟು ಸೋತುಹೋದ ಮಹಿಳೆ: ಹೊತ್ತೊಯ್ದ ಮನೆ ಮಾಲಕ

ಪಗಡೆಯಾಟದಲ್ಲಿ ತನ್ನನ್ನೇ ಪಣಕ್ಕಿಟ್ಟು ಸೋತುಹೋದ ಮಹಿಳೆ: ಹೊತ್ತೊಯ್ದ ಮನೆ ಮಾಲಕ


ಉತ್ತರ ಪ್ರದೇಶ: ಮಹಾಭಾರತದಲ್ಲಿ ಪಗಡೆಯಾಟವಾಡ ಧರ್ಮರಾಯ ಪತ್ನಿ ಸಹಿತ ತಮ್ಮಂದಿರು, ರಾಜ್ಯವನ್ನು ಪಣಕ್ಕಿಟ್ಟು ಕೊನೆಗೆ ಕೌರವನೆದುರು ಸೋತು ಎಲ್ಲವನ್ನು ಕಳೆದುಕೊಂಡು ಕಾಡಿಗೆ ಹೋಗಿರುವ ಕತೆ ಎಲ್ಲರಿಗೂ ಗೊತ್ತೇ ಇದೆ. ಇದೀಗ ಪಗಡೆಯಾಟದಲ್ಲಿ ಮಹಿಳೆಯೊಬ್ಬಳು ತನ್ನನ್ನೇ ತಾನು ಪಣಕ್ಕಿಟ್ಟು ಮನೆ ಮಾಲೀಕನೆದುರು ಸೋತು ಹೋಗಿ ಆತನ ಪಾಲಾಗಿರುವ ವಿಚಿತ್ರ ಘಟನೆಯೊಂದು ಉತ್ತರಪ್ರದೇಶದ ಪ್ರತಾಫ್‌ಗಢದಲ್ಲಿ ನಡೆದಿದೆ. ಈ ಘಟನೆಯಿಂದ ಆಘಾತಗೊಂಡ ಮಹಿಳೆ ಪತಿ ಪೊಲೀಸರಿಗೆ ದೂರು ನೀಡಿದ್ದಾನೆ.

ಪಗಡೆಯಾಟವಾಡಿ ಮನೆ ಮಾಲಕನ ಪಾಲಾದ ಮಹಿಳೆಯ ಹೆಸರು ರೇಣು. ಲೂಡೋ ಗೇಮ್‌ ಗೀಳು ಹೆಚ್ಚಿಸಿಕೊಂಡಿದ್ದ ಈಕೆ ತನ್ನ ಮನೆಯ ಮಾಲಕನೊಂದಿಗೆ ಸದಾ ಆಟವಾಡುತ್ತಿದ್ದಳು. ಹೀಗೆ ಆಟವಾಡುತ್ತಾ ತನ್ನಲಿದ್ದ ಹಣವನ್ನೆಲ್ಲಾ ಕಳೆದುಕೊಂಡಿದ್ದ ಆಕೆ, ಆ ಬಳಿಕ ತನ್ನನ್ನೇ ತಾನು ಪಣಕ್ಕಿಟ್ಟಿದ್ದಳು. ಆಗಲೂ ಸೋತ ಆಕೆಯನ್ನು ಮನೆ ಮಾಲಕ ಹೊತ್ತೊಯ್ದಿದ್ದಾನೆ ಎನ್ನಲಾಗಿದೆ. ಇದರಿಂದ ಮಹಿಳೆ ತನ್ನ ಪತಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ. ವಿಚಾರ ತಿಳಿದ ಗಂಡ ಓಡಿಬಂದು ಪೊಲೀಸರಿಗೆ ದೂರು ನೀಡಿದ್ದಾನೆ.

ಮಹಿಳೆ ರೇಣುವಿನ ಪತಿ ದೂರದ ರಾಜಸ್ತಾನದ ಜೈಪುರದಲ್ಲಿಯೇ ಕೆಲಸ ಮಾಡುತ್ತಿದ್ದಾನೆ. ವಿಚಾರ ತಿಳಿಯುತ್ತಿದ್ದಂತೆ ಅಲ್ಲಿಂದ ಬಂದಿರುವ ರೇಣು ಪತಿ ಪ್ರತಾಪಗಢ ಪೊಲೀಸರಿಗೆ ದೂರು ನೀಡಿದ್ದಾನೆ. ಜೈಪುರದಲ್ಲಿ ದುಡಿಮೆ ಮಾಡುತ್ತಿದ್ದ ಆತ ಪತ್ನಿಗೆ ಹಣ ಕಳುಹಿಸುತ್ತಿದ್ದ. ಆದರೆ ಈ ಪತ್ನಿ ಆ ಹಣವನ್ನು ಜೂಜಾಡಿದ್ದಲ್ಲದೇ ತನ್ನನ್ನೇ ಪಣಕ್ಕಿಟ್ಟು ಈಗ ಪತಿಗೆ ಪತ್ನಿ ಇಲ್ಲದಂತೆ ಮಾಡಿದ್ದಾಳೆ.

ಘಟನೆಯ ಬಳಿಕ ಮಹಿಳೆ ಮನೆ ಮಾಲಕನೊಂದಿಗೆ ಆತನ ಮನೆಗೆ ಹೊರಟು ಹೋಗಿದ್ದಾಳೆ. ಆಕೆ ಆತನೊಂದಿಗೆ ಹೋಗದಂತೆ ಪತಿ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದಾನೆ. ಆದರೆ ಜೂಜಿನಲ್ಲಿ ಸೋತಿರುವುದರಿಂದ ವಾಪಸ್ ಬರಲು ಆಕೆ ಸಿದ್ಧಳಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Ads on article

Advertise in articles 1

advertising articles 2

Advertise under the article