-->

ಪ್ರೇಯಸಿಯ ಭೇಟಿಯಾಗಲು ತಡರಾತ್ರಿ ಮನೆಗೆ ಬಂದ ಪ್ರಿಯಕರ ಯುವತಿ ಮನೆಯವರು ಬೆನ್ನಟ್ಟಿದಾಗ ಬಾವಿಗೆ ಹಾರಿದ

ಪ್ರೇಯಸಿಯ ಭೇಟಿಯಾಗಲು ತಡರಾತ್ರಿ ಮನೆಗೆ ಬಂದ ಪ್ರಿಯಕರ ಯುವತಿ ಮನೆಯವರು ಬೆನ್ನಟ್ಟಿದಾಗ ಬಾವಿಗೆ ಹಾರಿದ

ಛಾಪ್ರಾ (ಬಿಹಾರ): ಮನೆಯವರ ಕಣ್ತಪ್ಪಿಸಿ ಪ್ರೇಮಿಗಳು ಪರಸ್ಪರ ಭೇಟಿಯಾಗಲು ಯಾವಯಾವುದೋ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಹೇಗಾದರೂ ಮಾಡಿ ಅವರಿಬ್ಬರು ಸಂಧಿಸಿದ ವೇಳೆ ಯಾರಾದರು ನೋಡಿದರೆ ಎಂಬ ಭಯ ಅವರನ್ನು ಕಾಡುತ್ತಲೇ ಇರುತ್ತದೆ. ಇಂತಹದ್ದೇ ಇಕ್ಕಟ್ಟಿನಲ್ಲಿದ್ದ ಬಿಹಾರದ ಪ್ರೇಮಿಯೊಬ್ಬ ಪ್ರೇಯಸಿಯ ಮನೆಯವರ ಕೈಗೆ ಸಿಕ್ಕಿಬಿದ್ದು ಬಾವಿಗೆ ಹಾರಿದ್ದಾನೆ. ಆ ಬಳಿಕ ಹೇಗೋ ಸ್ಥಳೀಯರ ನೆರವಿನಿಂದ ಮೇಲೆ ಬಂದು ಫುಲ್ ಖುಷಿಯಾಗಿದ್ದಾನಂತೆ. ಅದು ಹೇಗೆ ಅನ್ನೋದನ್ನು ತಿಳಿಯೋಣ..

ಗೌಪ್ಯವಾಗಿ ಬಂದು ಪೇಚಿಗೆ ಸಿಲುಕಿದ ಪ್ರೇಮಿ ಮೋತಿರಾಜ್‌ಪುರದ ನಿವಾಸಿ ಮುನ್ನಾ ರಾಜ್. ಈತ ತನ್ನ ಗ್ರಾಮದ ಬಳಿಯ ಛಾಪ್ರಾ ನಿವಾಸಿ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆಯನ್ನು ಭೇಟಿಯಾಗಲೆಂದು ಶನಿವಾರ ತಡರಾತ್ರಿ 2 ಗಂಟೆಯ ವೇಳೆ ಆಕೆಯ ಮನೆಗೆ ಗೌಪ್ಯವಾಗಿ ಬಂದಿದ್ದಾನೆ.‌ ಈ ವೇಳೆ ಸದ್ದು ಕೇಳಿ ಎಚ್ಚರವಾದ ಪ್ರೇಯಸಿಯ ಮನೆಯವರು ಮುನ್ನಾರಾಜ್ ನನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಆತ ಆಳವಾದ ಬಾವಿಗೆ ಹಾರಿದ್ದಾನೆ. ಬಳಿಕ ಗ್ರಾಮಸ್ಥರು ಯುವಕನನ್ನು ಹಗ್ಗದ ಸಹಾಯದಿಂದ ಮೇಲೆತ್ತಿದ್ದಾರೆ. 

ಈತನ ಕೃತ್ಯದಿಂದ ಆಕ್ರೋಶಗೊಂಡ ಕುಟುಂಬಸ್ಥರು ಪಂಚಾಯತಿಕೆ ನಡೆಸಿದ್ದಾರೆ. ಬಳಿಕ ಯುವತಿಯೊಂದಿಗಿನ ಯುವಕನ ಪ್ರೇಮಸಂಬಂಧ ದೃಢವಾದ ಹಿನ್ನೆಲೆಯಲ್ಲಿ ಇಬ್ಬರಿಗೆ ಊರಿನ ದೇವಸ್ಥಾನದಲ್ಲಿ ಮದುವೆ ಮಾಡಿಸಿದ್ದಾರೆ. ಈ ಮೂಲಕ ಆತ ಪೇಚಿಗೆ ಸಿಲುಕಿ ತೊಂದರೆ ಅನುಭವಿಸಿದರೂ, ತನ್ನ ಪ್ರೇಯಸಿಯನ್ನು ಮದುವೆಯಾದ ಖುಷಿಯಲ್ಲಿ ತೇಲಾಡುತ್ತಿದ್ದಾನೆ.

Ads on article

Advertise in articles 1

advertising articles 2

Advertise under the article