Kadaba:- ಪವಿತ್ರ ಉಮ್ರಾಯಾತ್ರೆಯ ಸಮಯದಲ್ಲಿ ಮಕ್ಕಾದಲ್ಲಿ ಮೃತಪಟ್ಟ ಕಡಬದ ಆಟೋಚಾಲಕ..!

ಕಡಬ

ಪವಿತ್ರ ಉಮ್ರಾ ಯಾತ್ರೆಯ ವೇಳೆ ಕಡಬದ ವ್ಯಕ್ತಿಯೋರ್ವರು ಮುಸ್ಲಿಮರ ಪವಿತ್ರ ತಾಣ ಮಕ್ಕಾದಲ್ಲಿ ನಿಧನರಾದ ಘಟನೆ ಇಂದು ನಡೆದಿದೆ.

ಕಡಬದ ಕೋಡಿಂಬಾಳದ ನಿವಾಸಿ ಆಟೋ ಚಾಲಕರಾಗಿರುವ ಅಬೂಬಕ್ಕರ್ ಎಂಬವರು ತನ್ನ ಪತ್ನಿ ಸೇರಿದಂತೆ ನಲ್ವತ್ತು ಜನರ ತಂಡವು ಪವಿತ್ರ ಉಮ್ರಾಯಾತ್ರೆ ಕೈಗೊಂಡಿದ್ದರು. ಮುಸ್ಲಿಮರ ಪುಣ್ಯ  ತಾಣ ಅರಬ್ ರಾಷ್ರ್ಟದ ಮಕ್ಕಾದಲ್ಲಿ ಅಬೂಬಕ್ಕರ್ ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಸ್ಥಳೀಯ ರಮಾಲಿಕ್ ಫ಼ೈಜ಼ಲ್ ಮುಸ್ತಶಾ ಮಾಲೀಕ್ ಫ಼ಜ಼ಲ್ ಆಸ್ಪತ್ರೆಗೆ ಸೇರಿಸಲಾಗಿತ್ತು.ಆದರೆ ಅಷ್ಟೋತ್ತಿಗಾಗಲೇ ಮೃತಪಟ್ಟಿದ್ದರು.ಉಮ್ರಾ ಮತ್ತು ಹಜ್‌ಯಾತ್ರೆ ಸಮಯದಲ್ಲಿ ಮಕ್ಕಾದಲ್ಲಿ ಮೃತಪಡುವುದು ಮುಸ್ಲಿಂ ಪದ್ದತಿ ಪ್ರಕಾರ ಅತ್ಯಂತ ವಿರಳ ಮತ್ತು ಪುಣ್ಯಕಾರ್ಯ ಎನ್ನಲಾಗಿದೆ. ಮೃತದೇಹವನ್ನು ಮಕ್ಕಾದಲ್ಲೇ ದಫನಕ್ರಿಯೆ ಮಾಡಲಾಗುವುದೆಂದು ತಿಳಿದು ಬಂದಿದೆ.