-->

ದೇಶದ ಮೊದಲ ಸ್ಕೌಟ್ಸ್ ಗೈಡ್ಸ್ ಜಾಂಬೂರಿಗೆ ದಿನಗಣನೆ: ಮೂಡಬಿದಿರೆಯಲ್ಲಿ ಭರದ ತಯಾರಿ

ದೇಶದ ಮೊದಲ ಸ್ಕೌಟ್ಸ್ ಗೈಡ್ಸ್ ಜಾಂಬೂರಿಗೆ ದಿನಗಣನೆ: ಮೂಡಬಿದಿರೆಯಲ್ಲಿ ಭರದ ತಯಾರಿ

ದೇಶದ ಮೊದಲ ಸ್ಕೌಟ್ಸ್ ಗೈಡ್ಸ್ ಜಾಂಬೂರಿಗೆ ದಿನಗಣನೆ: ಮೂಡಬಿದಿರೆಯಲ್ಲಿ ಭರದ ತಯಾರಿ





ಜೈನಕಾಶಿ ಮೂಡಬಿದಿರೆಯಲ್ಲಿ ಸಡಗರದ ವಾತಾವರಣ ನೆಲೆಸಿದೆ. ಇದಕ್ಕೆ ಕಾರಣ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಸ್ಕೌಟ್ಸ್‌ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ..



150 ಎಕರೆ ವಿಸ್ತಾರದ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಈ ಬೃಹತ್ ಸಾಂಸ್ಕೃತಿಕ ಜಾಂಬೂರಿಗೆ ಭರದ ತಯಾರಿ ನಡೆದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗುವ ಶೈಕ್ಷಣಿಕ ಪಠ್ಯೇತರ ಉತ್ಸವಕ್ಕೆ ಕರಾವಳಿ ಸಾಕ್ಷಿಯಾಗಲಿದೆ.



10 ರಾಷ್ಟ್ರಗಳಿಂದ ಬರುವ ಲಕ್ಷಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿಗೆ ಜಾಂಬೂರಿ ಜೀವನದುದ್ದಕ್ಕೂ ಮರೆಯದ ಸ್ಮರಣೀಯ ಕ್ಷಣಗಳನ್ನು ಕಟ್ಟಿ ಕೊಡಲಿದೆ.



35 ಕೋಟಿ ರೂ. ವೆಚ್ಚದಲ್ಲಿ ವಿವಿಧ ತಯಾರಿಗಳು ನಡೆದಿದ್ದು, ಸರ್ಕಾರದಿಂದ ಮಹತ್ವದ ಅನುದಾನ ಇನ್ನಷ್ಟೇ ಹರಿದುಬರಬೇಕಿದೆ. ಜಾಂಬೂರಿ ಉತ್ಸವದ ನೇತೃತ್ವ ವಹಿಸಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ. ಮೋಹನ ಆಳ್ವ ಜನರ ಭಾಗೀದಾರಿಕೆಯನ್ನೂ ನಿರೀಕ್ಷಿಸಿದ್ದಾರೆ.






ಹಸಿರು ಹೊರೆ ಕಾಣಿಕೆಯಿಂದ ಹಿಡಿದು ತನು-ಮನ-ಧನದ ಸಹಕಾರ ಬೇಕಾಗಿದೆ ಎಂದಿರುವ ಅವರು, ವಿಜ್ಞಾನ, ಆಹಾರ, ಕಲಾ, ಕೃಷಿ ಮತ್ತು ಪುಸ್ತಕ ಮೇಳಗಳು ಜಾಂಬೂರಿಯ ಶೋಭೆಯನ್ನು ಹೆಚ್ಚಿಸಲಿದೆ ಎಂದಿದ್ದಾರೆ.









Ads on article

Advertise in articles 1

advertising articles 2

Advertise under the article