-->

ದಕ್ಷಿಣ ಕೊರಿಯಾ, ಅಮೇರಿಕಾದ ಸಿನಿಮಾ ವೀಕ್ಷಣೆ: ಅಪ್ರಾಪ್ತ ವಿದ್ಯಾರ್ಥಿಗಳನ್ನು ಗಲ್ಲಿಗೇರಿಸಿದ ಉತ್ತರ ಕೊರಿಯಾ

ದಕ್ಷಿಣ ಕೊರಿಯಾ, ಅಮೇರಿಕಾದ ಸಿನಿಮಾ ವೀಕ್ಷಣೆ: ಅಪ್ರಾಪ್ತ ವಿದ್ಯಾರ್ಥಿಗಳನ್ನು ಗಲ್ಲಿಗೇರಿಸಿದ ಉತ್ತರ ಕೊರಿಯಾ

ಪ್ರೋಂಗ್ಯಾಂಗ್: ದಕ್ಷಿಣ ಕೊರಿಯಾ ಹಾಗೂ ಅಮೆರಿಕಾದ ಸಿನೆಮಾವನ್ನು ವೀಕ್ಷಿಸಿರುವ ಇಬ್ಬರು ಹೈಸ್ಕೂಲ್ ವಿದ್ಯಾರ್ಥಿಗಳನ್ನು ಉತ್ತರ ಕೊರಿಯಾದಲ್ಲಿ ಗಲ್ಲಿಗೇರಿಸಲಾಗಿದೆ ಎಂಬ ಭಯಾನಕ ಘಟನೆಯೊಂದು ವರದಿಯಾಗಿದೆ.

ಉತ್ತರ ಕೊರಿಯಾದಲ್ಲಿ ದಕ್ಷಿಣ ಕೊರಿಯಾದ ಕೆ ಡ್ರಾಮಾ ಎಂದು ಕರೆಯಲ್ಪಡುವ ಸಿನೆಮಾ, ಅಮೇರಿಕಾದ ಸಿನಿಮಾ ವೀಕ್ಷಣೆಯನ್ನು ನಿಷೇಧಿಸಲಾಗಿದೆ. ಆದರೆ ಕಳೆದ ಅಕ್ಟೋಬರ್ ವೇಳೆ ಉತ್ತರ ಕೊರಿಯಾದ ರ್ಯಾಂಗಾಂಗ್ ಪ್ರಾಂತ್ಯದಲ್ಲಿ 16 ಮತ್ತು 17 ವರ್ಷದ ಈ ಇಬ್ಬರು ವಿದ್ಯಾರ್ಥಿಗಳು ಶಾಲೆಯ ಕೋಣೆಯೊಂದರಲ್ಲಿ ಕೆ ಡ್ರಾಮಾ, ಅಮೇರಿಕಾದ ಡ್ರಾಮಾ ವೀಕ್ಷಿಸಿದ್ದರು. ಈ ಅಪರಾಧಕ್ಕಾಗಿ ಅವರನ್ನು ಬಂಧಿಸಿ ರಾಜಧಾನಿಯ ವಾಯುನೆಲೆಯ ಮೈದಾನದಲ್ಲಿ ಸ್ಥಳೀಯರ ಸಮ್ಮುಖದಲ್ಲಿ ಗಲ್ಲಿಗೇರಿಸಲಾಗಿದೆ ಎಂದು ವರದಿಯಾಗಿದೆ.

ಈ ಘಟನೆ ಅಕ್ಟೋಬರ್ ನಡೆದಿದ್ದರೂ ಕಳೆದ ವಾರವಷ್ಟೇ ಬಹಿರಂಗಗೊಂಡಿದೆ. ಈ ವಿದ್ಯಾರ್ಥಿಗಳು ಎಸಗಿರುವುದು ಉತ್ತರ ಕೊರಿಯಾದ ದೃಷ್ಟಿಯಲ್ಲಿ ಅನಿಷ್ಟ ಕೃತ್ಯ. ಆದ್ದರಿಂದ ಪ್ರಾಂತ್ಯದ ಎಲ್ಲಾ ನಿವಾಸಿಗಳು ಈ ಗಲ್ಲು ಶಿಕ್ಷೆಯನ್ನು ನೋಡಲು ವ್ಯವಸ್ಥೆ ಮಾಡಲಾಗಿತ್ತು ಎಂದು ಸರಕಾರ ಹೇಳಿದೆ ಎಂದು ವರದಿಯಾಗಿದೆ.  

Ads on article

Advertise in articles 1

advertising articles 2

Advertise under the article