ಕೂದಲು ಬೆಳ್ಳಗಾಗುವ ಹಾಗೂ ಉದುರುವ ಸಮಸ್ಯೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆ ಈ ಕಪ್ಪು ಎಳ್ಳು..!


ಕಪ್ಪು ಎಳ್ಳನ್ನು ಒಣಗಿಸಿದ ನಂತರ ಅದನ್ನು ಪುಡಿ ಮಾಡಿ. ನಂತರ ಅದಕ್ಕೆ ಈರುಳ್ಳಿ ರಸ ಮತ್ತು ಅಲೋವೆರಾ ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಮತ್ತು ಸುಮಾರು ಒಂದು ಗಂಟೆಗಳ ಕಾಲ ಹಾಗೆಯೇ ಬಿಡಿ. ನಂತರ ಕೂದಲನ್ನು ತಣ್ಣೀರಿನಿಂದ ತೊಳೆಯಿರಿ. ಹೀಗೆ ತಿಂಗಳಿಗೆ ಮೂರು ನಾಲ್ಕು ಬಾರಿ ಮಾಡುತ್ತಾ ಬಂದರೆ ಕ್ರಮೇಣ ಬಿಳಿ ಕೂದಲು ಕಡಿಮೆಯಾಗುತ್ತದೆ.  


ಹೇರ್ ಪೇಸ್ಟ್‌ಗಾಗಿ ಬಳಸುವ ಕಪ್ಪು ಎಳ್ಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದನ್ನು ಕೂದಲಿಗೆ ಹಚ್ಚುವುದರಿಂದ ನೆತ್ತಿಯನ್ನು ಪೋಷಿಸುತ್ತದೆ. ತಲೆಹೊಟ್ಟು ಹೋಗಲಾಡಿಸುತ್ತದೆ. ಇದರಿಂದಾಗಿ ಕೂದಲು ಉದುರುವುದು ಕಡಿಮೆಯಾಗುತ್ತದೆ. ಮಾತ್ರವಲ್ಲ ಕೂದಲಿನಲ್ಲಿನ ಸೋಂಕಿನ ಸಮಸ್ಯೆಯೂ ದೂರವಾಗುತ್ತದೆ.


ಇದರ ಬಳಕೆಯಿಂದ ಕೂದಲು ಮೃದುವಾಗುತ್ತದೆ ಮತ್ತು ಅವುಗಳಲ್ಲಿ ಹೊಳಪು ಬರುತ್ತದೆ. ಈ ಪೇಸ್ಟ್ ಕೂದಲು ಒಡೆಯುವ ಸಮಸ್ಯೆಯನ್ನು ನಿವಾರಿಸುತ್ತದೆ.