ಹೊರಗಿನಿಂದ ಲಾಕ್ ಮಾಡಿ ಮನೆಗೆ ಬೆಂಕಿಯಿಟ್ಟ ದುಷ್ಕರ್ಮಿಗಳು: ಒಳಗಿದ್ದವರು ಏನಾದರು ಗೊತ್ತೇ?


ನೆಲಮಂಗಲ: ಹೊರಗಿನಿಂದ ಲಾಕ್ ಮಾಡಿ ದುಷ್ಕರ್ಮಿಗಳು ಮನೆಯೊಂದಕ್ಕೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆ ದಾಬಸಪೇಟೆ ಸಮೀಪದ ಹೊನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ.  ಮನೆಯೊಳಗಿದ್ದ ದಂಪತಿ ಹಾಗೂ 5 ತಿಂಗಳ ಹಸುಗೂಸು ಅದೃಷ್ಟವಶಾತ್ ಪಾರಾಗಿದ್ದಾರೆ.

ಪುರುಷೋತ್ತಮ್ ಎಂಬವರ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಘಟನೆಯಿಂದ ಪುರುಷೋತ್ತಮ್ ಹಾಗೂ ಅವರ ಪತ್ನಿ ಆಶಾರಾಣಿಗೆ ಸುಟ್ಟ ಗಾಯಗಳಾಗಿವೆ. ಐದು ತಿಂಗಳ ಕೂಸಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ತಡರಾತ್ರಿ ಈ ಘಟನೆ ನಡೆದಿದೆ. ಮನೆಯೊಳಗಿಂದ ಬೊಬ್ಬೆ ಕೇಳಿದ ತಕ್ಷಣ ಸ್ಥಳೀಯರು ಎಚ್ಚೆತ್ತುಕೊಂಡು ಬೆಂಯ ನಂದಿಸಿದ್ದಾರೆ. ಬೆಂಕಿಯಿಂದ ಸುಟ್ಟುಗಾಯಗಳಾಗಿರುವ ಪುರುಷೋತ್ತಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆದರೆ ಬೆಂಕಿಯ ತೀವ್ರತೆಗೆ ಮನೆಯಲ್ಲಿದ್ದ ಬಟ್ಟೆಗಳು, ಕೆಕ ವಸ್ತುಗಳು ಸುಟ್ಟು ಹೋಗಿವೆ. ಈ ಬಗ್ಗೆ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌ ಘಟನಾ ಸ್ಥಳಕ್ಕೆ ದಾಬಸ್‌ಪೇಟೆ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ತನಿಖೆಯ ನಂತರ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಕಾರಣಕ್ಕೆ ಉತ್ತರ ದೊರೆಯಲಿದೆ.
BREAKING NEWS
Loading latest news...
Join our WhatsApp Channel Powered By : Online Pudu