-->
 ಡಿಜಿಟಲ್ ಗ್ರಂಥಾಲಯದ ಕುರಿತು ಮಾಹಿತಿ ಕಾರ್ಯಾಗಾರ

ಡಿಜಿಟಲ್ ಗ್ರಂಥಾಲಯದ ಕುರಿತು ಮಾಹಿತಿ ಕಾರ್ಯಾಗಾರ



ಮೂಡುಬಿದಿರೆ: ಒಂದು ವ್ಯಕ್ತಿ ಜೀವನದಲ್ಲಿ ಪರಿಪೂರ್ಣಗೊಳ್ಳಬೇಕಾದರೆ ಗ್ರಂಥಾಲಯದ ಪಾತ್ರ ಮಹತ್ವದ್ದಾಗಿದೆ. ಆಧುನಿಕ ಯುಗದಲ್ಲಿ ಡಿಜಿಟಲ್ ಗ್ರಂಥಾಲಯ ಮತ್ತು ಡಿಜಿಟಲ್ ಪ್ರತಿಗಳು ಯಶಸ್ವಿಯಾಗುತ್ತಿವೆ ಎಂದು ಎಂಐಟಿ ಮಣಿಪಾಲದ ಮುಖ್ಯ ಗ್ರಂಥಪಾಲಕಿ ಡಾ. ರೇಖಾ ಡಿ ಪೈ ಹೇಳಿದರು. 

ಅವರು ಮಂಗಳವಾರ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣಲ್ಲಿ ನೆಡೆದ ಶೈಕ್ಷಣಿಕ ಅಭಿವೃದ್ಧಿಗಾಗಿ ಎಲೆಕ್ಟ್ರಾನಿಕ್ ಸಂಪನ್ಮೂಲಗಳ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.



ಜಗತ್ತು ಈಗ ಹೊಸ ವಿಧಾನಕ್ಕೆ ತೆರೆದುಕೊಂಡಿದೆ. ಎಲ್ಲ ಮಾಹಿತಿಗಳು ಕ್ಷಣಮಾತ್ರದಲ್ಲಿ ಬೆಳಳಿನ ತುದಿಯಲ್ಲಿ ಲಭ್ಯವಿರುತ್ತದೆ. ಗೂಗಲ್ ಮೂಲಕ ಕೀ ವರ್ಡ್ಸ್ ಗಳನ್ನು ಬಳಸಿಕೊಂಡು ಸುಲಭವಾಗಿ ಯಾವ ಭಾಷೆಯಲ್ಲಿಯೂ ಪುಸ್ತಕಗಳನ್ನು ಓದಬಹುದು. ಶೈಕ್ಷಣಿಕವಾಗಿ ಹೆಚ್ಚಿನ ಮಾಹಿತಿಗಳು ಅವಶ್ಯವೆನಿಸಿದಾಗ ಡಿಜಿಟಲ್ ಪ್ರತಿಗಳನ್ನು ಬಳಸಿ ತಿಳಿದುಕೊಳ್ಳಬಹುದಾಗಿದೆ ಎಂದರು.

ಇ-ಬುಕ್‌ಗಳನ್ನು ನಾವು ಡೌನ್‌ಲೋಡ್ ಮಾಡಿಟ್ಟುಕೊಂಡು ಮುಂದಿನಗಳಲ್ಲಿ ಓದು ಮುಂದುವರಿಸಬಹುದಾಗಿದೆ. ಜತೆಗೆ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಪುಸ್ತಕವನ್ನು ಭಾರತದ ಒಂದು ಹಳ್ಳಿಯಲ್ಲಿ ಅತ್ಯಂತ ಸುಲಭವಾಗಿ ಓದಿ ತಿಳಿದುಕೊಳ್ಳಲು ಡಿಜಿಟಲ್ ಗ್ರಂಥಾಲಯ ಹಾಗೂ ಡಿಜಿಟಲ್ ಪುಸ್ತಕಗಳ ಪಾತ್ರ ಅತ್ಯಂತ ಮಹತ್ವದ್ದು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಗ್ರಂಥಾಲಯ ಜ್ಞಾನದ ಹೃದಯವಾಗಿದೆ ಹಾಗೂ ಜ್ಞಾನದ ದಾರಿಯಲ್ಲಿ ನಡೆಸುತ್ತದೆ ಲೈಬ್ರರಿಯಲ್ಲಿ ದೇವಸ್ಥಾನಕ್ಕೆ ಸಮಾನವಾಗಿದೆ. ಜಗತ್ತಿನ ವಿಷಯಗಳನ್ನು ತಿಳಿದುಕೊಳ್ಳಿ ಗ್ರಂಥಾಲಯ ಬಹಳ ದೊಡ್ಡ ಸಂಪತ್ತು ಎಂದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಗ್ರಂಥಪಾಲಕಿ ಶ್ಯಾಮಲತಾ, ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪ್ಪಸ್ಥಿತರಿದ್ದರು. ವಿದ್ಯಾರ್ಥಿನಿ ದೀಕ್ಷಾ ಕುಲಾಲ್ ಸ್ವಾಗತಿಸಿ, ದೀಕ್ಷಾ ನಿರೂಪಿಸಿದರು.


Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article