ಗದಗ: ಪುತ್ರ ಸಾವಿನ ಸುದ್ದಿ ತಿಳಿದು ಹೆತ್ತವ್ವೆ ಆಘಾತಗೊಂಡು ಮೃತಪಟ್ಟಿರುವ ಘಟನೆಯೊಂದು ಗಜೇಂದ್ರಗಡ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ನಡೆದಿದೆ. ಈ ಮೂಲಕ ತಾಯಿ - ಮಗ ಸಾವಿನಲ್ಲಿ ಒಂದಾಗಿದ್ದಾರೆ.
ಪುತ್ರ ಶಿವರುದ್ರಯ್ಯ ಅಂದಾನಯ್ಯ ಪೂಜಾರ್ (38) ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಇಂದು ಮೃತಪಟ್ಟಿದ್ದಾನೆ. ಪುತ್ರ ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಅವರ ತಾಯಿ ಬಸಮ್ಮ(68) ಆಘಾತಗೊಂಡು ಹೃದಯಾಘಾತಕ್ಕೊಳಗಿದ್ದಾರೆ.
ಪ್ರಾಥಮಿಕ ಚಿಕಿತ್ಸೆ ನೀಡಿದರೂ ಆಕೆ ಬದುಕುಳಿದು ಬರಲೇ ಇಲ್ಲ. ಇದರೊಂದಿಗೆ ತಾಯಿ ಹಾಗೂ ಮಗ ಸಾವಿನಲ್ಲೂ ಒಂದಾಗಿದ್ದಾರೆ. ತಾಯಿ ಮತ್ತು ಪುತ್ರನ ಮೃತದೇಹಗಳಿಗೆ ಅಂತಿಮ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಸಲಾಗಿದೆ.