-->

ಬಾಯ್ಕಾಟ್ ಬಿಸಿ ತಟ್ಟಿದವರಿಗೆ ತಿರುಗೇಟು ನೀಡಿದ ಶಾರುಖ್ ಖಾನ್

ಬಾಯ್ಕಾಟ್ ಬಿಸಿ ತಟ್ಟಿದವರಿಗೆ ತಿರುಗೇಟು ನೀಡಿದ ಶಾರುಖ್ ಖಾನ್


ನವದೆಹಲಿ: ಕೇಸರಿ ವಿವಾದವನ್ನು ಹುಟ್ಟು ಹಾಕಿರುವ ‘ಪಠಾಣ್​’ ಸಿನಿಮಾಕ್ಕೆ ಬಾಯ್ಕಾಟ್ ಬಿಸಿ ತಗುಲಿದೆ. ಈ ವಿಚಾರಕ್ಕೆ ಶಾರುಖ್​ ಖಾನ್​ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಸೋಶಿಯಲ್​ ಮೀಡಿಯಾಗಳಲ್ಲಿ ನೆಗೆಟಿವ್​ ವಿಚಾರಗಳನ್ನು ಹಬ್ಬಿಸುವ ಕುರಿತು ‘ಪಠಾಣ್​’ ಸಿನಿಮಾದ ಹೀರೋ ಶಾರುಖ್​ ಖಾನ್  ಕೊಲ್ಕತ್ತಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಗುರುವಾರ ಸಂಜೆ ಕೊಲ್ಕತ್ತಾ ಅಂತಾರಾಷ್ಟ್ರೀಯ ಸಿನಿಮೋತ್ಸವ ಉದ್ಘಾಟನೆಗೊಂಡಿದೆ. ಈ ಕಾರ್ಯಕ್ರಮಕ್ಕೆ ಶಾರುಖ್​ ಖಾನ್​, ಅಮಿತಾಭ್​ ಬಚ್ಚನ್​, ಜಯಾ ಬಚ್ಚನ್, ರಾಣಿ ಮುಖರ್ಜಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕರು ಹಾಜರಿ ಹಾಕಿದ್ದರು. ಈ ವೇದಿಕೆಯಲ್ಲಿ ಶಾರುಖ್​ ಮಾತನಾಡಿರುವ ವಿಡಿಯೋ ವೈರಲ್​ ಆಗಿದೆ. 


‘ಸಂಕುಚಿತ ದೃಷ್ಟಿಕೋನದಿಂದ ಈ ರೀತಿ ಆಗುತ್ತಿದೆ. ಈ ಸಂದರ್ಭ ಸಿನಿಮಾಗೆ ಮಹತ್ವದ ಪಾತ್ರವಿದೆ. ಜಗತ್ತು ಸಹಜ ಸ್ಥಿತಿಗೆ ಬಂದಿದೆ. ನಾವೆಲ್ಲರೂ ಸಂತೋಷವಾಗಿದ್ದೇವೆ. ನಾನು ಹೆಚ್ಚು ಖುಷಿಯಾಗಿದ್ದೇನೆ. ಜಗತ್ತು ಏನು ಬೇಕಾದರೂ ಮಾಡಿಕೊಳ್ಳಲಿ. ನಾನು, ನೀವು ಮತ್ತು ಪಾಸಿಟಿವ್​ ಮನಸ್ಥಿತಿ ಇರುವ ಎಲ್ಲ ಜನರು ಜೀವಂತವಾಗಿದ್ದೇವೆ ಅಂತ ಹೇಳಲು ನನಗೆ ಯಾವುದೇ ಅಡೆತಡೆ ಇಲ್ಲ’ ಎಂದು ಅವರು ಎಲ್ಲಿಯೂ ‘ಪಠಾಣ್​’ ಚಿತ್ರದ ಹೆಸರು ಎತ್ತದೆ ಮಾತನಾಡಿದ್ದಾರೆ. ಆದರೆ ಭಾಷಣ ಮುಗಿಸುವಾಗ ಅವರು ಹೇಳಿದ ಒಂದು ಮಾತು ಸಖತ್​ ವೈರಲ್ ಆಗಿದೆ.​ ಹೇಳಿದ್ದಾರೆ.

ಶಾರುಖ್​ ಖಾನ್ ಮಾತನಾಡಿರುವ ವೀಡಿಯೋವನ್ನು ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡುತ್ತಿದ್ದಾರೆ. ‘ಪಠಾಣ್​’ ಚಿತ್ರವನ್ನು ಬಾಯ್ಕಾಟ್​ ಮಾಡಬೇಕು ಎಂದು ಬೊಬ್ಬೆ ಹೊಡೆಯುತ್ತಿರುವವರನ್ನು ಉದ್ದೇಶಿಸಿಯೇ ಶಾರುಖ್​ ಈ ರೀತಿ ಹೇಳಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ. ವಿರೋಧದ ನಡುವೆಯೂ ಪಠಾಣ್ ಸಿನಿಮಾದ ‘ಬೇಷರಂ ರಂಗ್​..’ ಹಾಡು ಧೂಳೆಬ್ಬಿಸುತ್ತಿದೆ. 5 ಕೋಟಿಗೂ ಅಧಿಕ ಬಾರಿ ವೀಕ್ಷಣೆ ಕಂಡು ಸದ್ದು ಮಾಡುತ್ತಿದೆ.


Ads on article

Advertise in articles 1

advertising articles 2

Advertise under the article