-->
ಕೇವಲ 26ನೇ ವಯಸ್ಸಿಗೆ 21 ಮದುವೆಯಾದ ಭೂಪ: ಈತ ಇಷ್ಟು ವಿವಾಹವಾದ ಕಾರಣ ಕೇಳಿದರೆ ಶಾಕ್ ಆಗೋದು ಖಂಡಿತಾ

ಕೇವಲ 26ನೇ ವಯಸ್ಸಿಗೆ 21 ಮದುವೆಯಾದ ಭೂಪ: ಈತ ಇಷ್ಟು ವಿವಾಹವಾದ ಕಾರಣ ಕೇಳಿದರೆ ಶಾಕ್ ಆಗೋದು ಖಂಡಿತಾ


ಚೆನ್ನೈ: ವಯಸ್ಸಾಗುತ್ತಿದ್ದರೂ ಇನ್ನು ವಿವಾಹವಾಗಿಲ್ಲ, ಹೆಣ್ಣು ಸಿಗುತ್ತಿಲ್ಲ ಎಂದು ಕೆಲ ಯುವಕರು ವ್ಯಥೆ ಪಡುತ್ತಿರುವುದನ್ನು ನಾವು ನೋಡುತ್ತಿರುತ್ತೇವೆ. ಆದರೆ, ಇಲ್ಲೊಬ್ಬ ಅಸಾಮಿ ಕೇವಲ 26ನೇ ವಯಸ್ಸಿಗೆ 21 ಮದುವೆಯಾಗಿ ಎಲ್ಲರೂ ಬೆರಗಾಗುವಂತೆ ಮಾಡಿದ್ದಾನೆ. 

ತಮಿಳುನಾಡಿನ ತಂಜಾವೂರು ಜಿಲ್ಲೆಯ ರಾಮನಪುಡಿ ಮೂಲದ ಕಾರ್ತಿಕ್ ರಾಜ ಎಂಬಾತನೇ 21 ಮದುವೆಯಾದ ಭೂಪ. ಈತ ಇದೇ ಮಾರ್ಚ್ ನಲ್ಲಿ ರಾಣಿ ಎಂಬಾಕೆಯನ್ನು ಮದುವೆಯಾಗಿದ್ದ. ಈ ವೇಳೆ ಹುಡುಗಿ ಕಡೆಯವರು ಕಾರ್ತಿಕ್‌ಗೆ ವರದಕ್ಷಿಣೆಯಾಗಿ 5 ಎಕರೆ ಭೂಮಿ, ಚಿನ್ನಾಭರಣ ಹಾಗೂ 1.50 ಲಕ್ಷ ರೂ. ನಗದು ನೀಡಿದ್ದರು. ಆದರೆ ಮದುವೆಯಾಗಿ ಕೆಲ ತಿಂಗಳ ಬಳಿಕ ಕಾರ್ತಿಕ್, ವರದಕ್ಷಿಣೆ ಹಣದೊಂದಿಗೆ ಪರಾರಿಯಾಗಿದ್ದ. ಬಳಿಕ ಕಾರ್ತಿಕ್‌ನನ್ನು ಹುಡುಕಾಡಿದ ರಾಣಿ ಕುಟುಂಬ, ಆತನ ಸುಳಿವು ಸಿಗದಿದ್ದಾಗ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿತು.

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ತೀವ್ರ ಶೋಧ ನಡೆಸಿ ಕಾರ್ತಿಕ್‌ನನ್ನು ಪತ್ತೆ ಮಾಡಿ ಅರೆಸ್ಟ್ ಮಾಡಿದ್ದಾರೆ. ಬಳಿಕ ಈತನನ್ನು ಪೊಲೀಸ್ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ಅನೇಕ ಶಾಕಿಂಗ್ ಸಂಗತಿಗಳನ್ನು ಆರೋಪಿ ಕಾರ್ತಿಕ್ ಬಾಯ್ದಿಟ್ಟಿದ್ದಾನೆ. ಕಾರ್ತಿಕ್ ಈವರೆಗೆ ರಾಣಿ ಸೇರಿದಂತೆ ಒಟ್ಟು 21 ಯುವತಿಯರನ್ನು ಮದುವೆಯಾಗಿದ್ದಾನೆಂದು ತಿಳಿದುಬಂದಿದೆ.

ಆರೋಪಿ ಕಾರ್ತಿಕ್ ರಾಜ ಐಷಾರಾಮಿ ಜೀವನಕ್ಕೆ ಒಗ್ಗಿಕೊಂಡಿದ್ದ. ಹಣ ಸಂಪಾದನೆಗಾಗಿ ತಾನು ಯುವತಿಯರನ್ನು ಮದುವೆಯಾಗಿ ವಂಚಿಸುವ ಮಾರ್ಗವನ್ನು ಆಯ್ದುಕೊಂಡಿರುವುದಾಗಿ ಆತ ಬಾಯಿ ಬಿಟ್ಟಿದ್ದಾನೆ. ಒಳ್ಳೆಯ ಉದ್ಯೋಗದಲ್ಲಿದ್ದೇನೆ ಎಂದು ಹೇಳಿದರೆ ಜಾಸ್ತಿ ವರದಕ್ಷಿಣೆ ಕೊಡುತ್ತಾರೆ ಎಂದು ಸುಳ್ಳು ಹೇಳುತ್ತಿದ್ದ. ಬಳಿಕ ಯಾವೊಬ್ಬ ಪತ್ನಿಯೊಂದಿಗೂ ಕನಿಷ್ಠ 5 ತಿಂಗಳು ಸಹ ಕಳೆಯುತ್ತಿರಲಿಲ್ಲ. ಮದುವೆಯ ಬಳಿಕ ಎಲ್ಲ ಹಣವನ್ನು ತೆಗೆದುಕೊಂಡು ಆರೋಪಿ ಪರಾರಿಯಾಗುತ್ತಿದ್ದ. ಎಲ್ಲವೂ ಮುಗಿದ ಮೇಲೆ ಬೇರೆ ಊರಿಗೆ ಹೋಗಿ ಬೇರೆ ಹುಡುಗಿಯೊಂದಿಗೆ ಮದುವೆಯಾಗುತ್ತಿದ್ದ. ತಮಿಳುನಾಡಿನ 13 ಜಿಲ್ಲೆಗಳಲ್ಲಿ ಮದುವೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

ಇದೀಗ ಕಾರ್ತಿಕ್ ರಾಜನ ಬಣ್ಣ ಬಯಲಾಗುತ್ತಿದ್ದಂತೆ ಆತ ಈ ಹಿಂದೆ ಮದುವೆಯಾಗಿದ್ದ 20 ಪತ್ನಿಯರೂ ಪೊಲೀಸರಿಗೆ ದೂರು ನೀಡಿದ್ದಾರೆ. ಸಂತ್ರಸ್ತರ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಾರ್ತಿಕ್ ರಾಜಾ ಬಳಿ ಆಡಿ ಕಾರು ಮಾತ್ರ ಇದೆ. ಚಿನ್ನ ಅಥವಾ ನಗದು ಏನೂ ಇಲ್ಲ ಪೊಲೀಸರು ಕಂಡುಕೊಂಡಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article