ವಂಗಾ ಬಾಬನ ಭಯಂಕರ ಭವಿಷ್ಯವಾಣಿ-2023 ರಲ್ಲಿ ಏಲಿಯನ್ ಅಟ್ಯಾಕ್ ಅಂತೆ, ಸೋಲಾರ್ ಸುನಾಮಿ ಅಂತೆ‌

ಸೋಫಿಯಾ: 2023ರ ಅವಧಿಯಲ್ಲಿ ಅನ್ಯಗ್ರಹ ಜೀವಿಗಳ ದಾಳಿ, ಸೋಲರ್ ಸುನಾಮಿಯಂತಹ ಅನೇಕ ಗಂಡಾಂತರಗಳಿಂದ ಪ್ರಪಂಚ ತತ್ತರಿಸಲಿದೆ ಎಂದು ನಾಸ್ಟ್ರಾಡಾಮಸ್‌ ಮಹಿಳೆ ಎಂದೇ ಪ್ರಸಿದ್ಧಿ ಹೊಂದಿದ ಬಾಬಾ ವಂಗಾ ಭವಿಷ್ಯವಾಣಿ ನುಡಿದಿದ್ದಾರೆ. ಇದೇ ವೇಳೆ ವಿಶ್ವದ ಅಂತ್ಯದ ಬಗ್ಗೆಯೂ ಇದೇ ವೇಳೆ ಸುಳಿವು ಕೊಟ್ಟಿದ್ದಾರೆ.

ಕೆಲ ತಿಂಗಳ ಹಿಂದೆಯಷ್ಟೇ ಭಾರತದ ಭವಿಷ್ಯ ನುಡಿದು ಆತಂಕ ಸೃಷ್ಟಿಸಿದ್ದ ಬಲ್ಗೇರಿಯಾದ ಈ ಕುರುಡು ಮಹಿಳೆ ಬಾಬಾ ವಂಗಾ, ಇದೀಗ ವಿಶ್ವದ ಭವಿಷ್ಯ ನುಡಿದು ಮತ್ತೊಮ್ಮೆ ಆತಂಕ ಉಂಟಾಗುವಂತೆ ಮಾಡಿದ್ದಾರೆ.2023ರಲ್ಲಿ ಸೋಲಾರ್ ಸುನಾಮಿ ಸಂಭವಿಸುತ್ತದೆ. ಪರಿಣಾಮ ಭೂಮಿಯ ಕಾಂತೀಯ ಕವಚ ನಾಶವಾಗಲಿದೆ. ಭೂಮಿಯ ಮೇಲೆ ಏಲಿಯನ್‌ಗಳ (ಅನ್ಯಗ್ರಹ ಜೀವಿ) ದಾಳಿಯಿಂದ ಲಕ್ಷಾಂತರ ನಿವಾಸಿಗಳು ಸಾಯಲಿದ್ದಾರೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.

ಭೂಮಿ ಬ್ರಹ್ಮಾಂಡದಲ್ಲಿ ಅನಿಶ್ಚಿತ ಸಮತೋಲನದಲ್ಲಿ ಉಳಿದಿದೆ. ಬಳಿಕ ಅದು ತನ್ನ ಕಕ್ಷೆಯನ್ನು ಬದಲಿಸುತ್ತದೆ. ಇದರಲ್ಲಿನ ಸಣ್ಣ ಬದಲಾವಣೆಯೂ ಹವಾಮಾನದಲ್ಲಿ ಭಾರೀ ಬದಲಾವಣೆ ಉಂಟುಮಾಡಬಹುದು. ಆಗ ಪರಿಸ್ಥಿತಿ ನಿಜಕ್ಕೂ ಭೀರಕವಾಗಿರುತ್ತದೆ ಎಂದು ಹೇಳಿದ್ದಾರೆ. ವಿದ್ಯುತ್ ಸ್ಥಾವರದಲ್ಲಿನ ಸ್ಫೋಟವು ವಿಷಕಾರಿ ಮೋಡಗಳ ರಚನೆಗೆ ಕಾರಣವಾಗಬಹುದು. ಅದು ಇಡೀ ಏಷ್ಯಾ ಖಂಡವೇ ಮಂಜು ಕವಿಯುವಂತೆ ಮಾಡುತ್ತದೆ. ಈ ಬದಲಾವಣೆಯಿಂದಾಗಿ ಇತರ ದೇಶಗಳು ಸಹ ಗಂಭೀರ ಕಾಯಿಲೆಗಳಿಂದ ಬಾಧಿಸತೊಡಗುತ್ತವೆ.