-->
1000938341
2023 ರಲ್ಲಿ ಈ 5 ರಾಶಿಯವರಿಗೆ ಯಾವ ರೀತಿಯ ಹಣದ ಕೊರತೆಯೂ ಇರುವುದಿಲ್ಲ!

2023 ರಲ್ಲಿ ಈ 5 ರಾಶಿಯವರಿಗೆ ಯಾವ ರೀತಿಯ ಹಣದ ಕೊರತೆಯೂ ಇರುವುದಿಲ್ಲ!

ಮಿಥುನ ರಾಶಿ : ಹೊಸ ವರ್ಷವು ಮಿಥುನ ರಾಶಿಯವರ ಪಾಲಿಗೆ ಅದೃಷ್ಟವನ್ನು ಹೊತ್ತು ತರಲಿದೆ. ವರ್ಷದ ಮೊದಲ ತಿಂಗಳಿನಿಂದಲೇ ಈ ರಾಶಿಯವರಿಗೆ ಒಳ್ಳೆಯ ಸಮಯ ಆರಂಭವಾಗಲಿದೆ. ಇವರ ಪಾಲಿಗೆ ಹೆಚ್ಚು ಹೆಚ್ಚು ಅವಕಾಶಗಳು ಎದುರಾಗಲಿವೆ. 

ಸಿಂಹ ರಾಶಿ : ಈ ರಾಶಿಯವರಿಗೆ ಜನವರಿ ತಿಂಗಳಿಂದಲೇ ಸುವರ್ಣ ದಿನಗಳು ಪ್ರಾರಂಭವಾಗುತ್ತವೆ. ಜನವರಿ 17 ರಂದು ಶನಿಗ್ರಹ ತನ್ನ ರಾಶಿಯನ್ನು ಬದಲಾಯಿಸಿ ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಶನಿಯ ರಾಶಿ ಬದಲಾವಣೆ ಸಿಂಹ ರಾಶಿಯವರ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. 

ತುಲಾ ರಾಶಿ : ತುಲಾ ರಾಶಿಯವರ ಪಾಲಿಗೆ 2023 ಅತ್ಯತ್ತಮ ವರ್ಷವಾಗಿರಲಿದೆ. ಇಲ್ಲಿಯವರೆಗೆ ಅನುಭವಿಸಿದ ಕಷ್ಟಗಳಿಗೆ ಅಂತ್ಯ ಸಿಗಲಿದೆ. ಅರ್ಧಕ್ಕೆ ನಿಂತಿರುವ ಎಲ್ಲಾ ಕೆಲಸಗಳು ಈ ವರ್ಷ ಚುರುಕು ಪಡೆದು ಪೂರ್ಣಗೊಳ್ಳಲಿದೆ. 


ವೃಶ್ಚಿಕ ರಾಶಿ : ಹೊಸ ವರ್ಷದಲ್ಲಿ ಜೀವನದಲ್ಲಿ ನೆಮ್ಮದಿ ಹೆಚ್ಚಾಗುತ್ತವೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಆದಾಯ ಹೆಚ್ಚಾಗುತ್ತದೆ. ಆದರೆ ವೆಚ್ಚಗಳು ಸಹ ಹೆಚ್ಚಾಗುತ್ತವೆ. ಈ ಹಿನ್ನೆಲೆಯಲ್ಲಿ ಖರ್ಚು ಮಾಡುವಾಗ ಯೋಚನೆ ಮಾಡಿ ಖರ್ಚು ಮಾಡಿ. ಕೈಯ್ಯಲ್ಲಿ ಹಣ ಇದೆ ಎಂದು ಮನಸ್ಸಿಗೆ ಬಂದಂತೆ ಹಣದ ಬಳಕೆ ಬೇಡ. 

ಕುಂಭ ರಾಶಿ : ಗುರು ಗ್ರಹವು ಕುಂಭ ರಾಶಿಯವರ ಕೈ ಹಿಡಿಯಲಿದೆ. ಗುರು ಗ್ರಹದ ರಾಶಿ ಬದಲಾವಣೆ ಕುಂಭ ರಾಶಿಯವರಿಗೆ ಅದೃಷ್ಟ ಬೆಳಗುತ್ತದೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಸಿಗುತ್ತದೆ. ಹೂಡಿಕೆ ಮಾಡುವುದಾದರೆ ಈ ವರ್ಷ ಒಳ್ಳೆಯ ಸಮಯ. 

Ads on article

Advertise in articles 1

advertising articles 2

Advertise under the article