-->
10 ದಿನಗಳ ಅಂತರದಲ್ಲಿ ಒಂದೇ ಶಾಲೆಯ ಮೂವರು ವಿದ್ಯಾರ್ಥಿನಿಯರು ಸಾವಿಗೆ ಶರಣು: ಕಾರಣ ಇದು...!

10 ದಿನಗಳ ಅಂತರದಲ್ಲಿ ಒಂದೇ ಶಾಲೆಯ ಮೂವರು ವಿದ್ಯಾರ್ಥಿನಿಯರು ಸಾವಿಗೆ ಶರಣು: ಕಾರಣ ಇದು...!
ಉತ್ತರಪ್ರದೇಶ: ಕೇವಲ 10 ದಿನಗಳ ಅಂತರದಲ್ಲಿ ಒಂದೇ ಶಾಲೆಯ ಮೂವರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡ ಆತಂಕಕಾರಿ ಬೆಳವಣಿಗೆಯೊಂದು ಉತ್ತರಪ್ರದೇಶದ ಸೀತಾಪುರದಲ್ಲಿ ನಡೆದಿದೆ. ಈ ಸರಣಿ ಸಾವುಗಳಿಗೆ ಪ್ರೇಮ ವೈಫಲ್ಯವೇ ಕಾರಣವಂತೆ.

ಹೌದು... ಒಂದೇ ಶಾಲೆಯ 11 - 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮೂವರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಡಿಸೆಂಬರ್ 10 ರಿಂದ 18ರ ನಡುವೆ ನಡೆದಿವೆ. ಈ ಎಲ್ಲಾ ಪ್ರಕರಣದಲ್ಲಿ ಯಾವುದೇ ವಿದ್ಯಾರ್ಥಿಗಳು ಅಥವಾ ಶಿಕ್ಷಕರ ಪಾತ್ರವಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ. ಮೂರೂ ಪ್ರಕರಣಗಳು ಪ್ರೇಮ ಪ್ರಕರಣಕ್ಕೆ ಸಂಬಂಧಿಸಿವೆ ಎಂದು ಸೀತಾಪುರದ ಎಎಸ್‌ಪಿ ಮಾಹಿತಿ ನೀಡಿದರು.

ಡಿ.10 ರಂದು ನಡೆದಿರುವ ಮೊದಲ ಆತ್ಮಹತ್ಯೆ ಪ್ರಕರಣದಲ್ಲಿ, ಹುಡುಗಿ ತನ್ನ ನೆರೆಹೊರೆಯ ಯುವಕ ರಾಹುಲ್ ಯಾದವ್ ನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಆದರೆ ಈ ಸಂಬಂಧವನ್ನು ಹುಡುಗಿಯ ಮನೆಯವರು ಒಪ್ಪಲಿಲ್ಲ. ಆದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ ಈ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ರಾಹುಲ್ ಯಾದವ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಎರಡನೇ ಆತ್ಮಹತ್ಯೆ ಪ್ರಕರಣದಲ್ಲಿ ಅಂಕಿತ್ ಪಾಸ್ವಾನ್ ಎಂಬ ಹುಡುಗನನ್ನು ಅದೇ ಶಾಲೆಯ ವಿದ್ಯಾರ್ಥಿನಿ ಪ್ರೀತಿಸುತ್ತಿದ್ದಳು. ಹುಡುಗಿಯ ಮನೆಯವರು ಈ ಸಂಬಂಧವನ್ನು ಒಪ್ಪಿದರು. ಆದರೆ ಅಂಕಿತ್‌ನ ತಾಯಿ ಮದುವೆಗೆ ವರಕ್ಷಿಣೆಯಾಗಿ ಬೈಕ್ ಕೇಳಿದ್ದರು. ಇದೇ ನೋವಿನಲ್ಲಿ ಹುಡುಗಿ ಡಿ.12 ರಂದು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೂರನೇ ಘಟನೆಯಲ್ಲಿ ನದಿಗೆ ಹಾರಿದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವಳಿಗೂ ಒಬ್ಬ ಹುಡುಗನ ಜೊತೆ ಪ್ರೀತಿ ಇತ್ತು. ಆಕೆಯ ಸಂಬಂಧಿ ಸಂಜಯ್ ತಿವಾರಿ ಆಕೆಯ ಪ್ರೇಮ ಪ್ರಕರಣದ ಬಗ್ಗೆ ಪೋಷಕರಿಗೆ ತಿಳಿಸಿದ್ದಾನೆ. ಪರಿಣಾಮ ಮನನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ. 

ನಾಲ್ಕನೇ ಪ್ರಕರಣದಲ್ಲಿ ತನ್ನ ಸ್ನೇಹಿತರು ಮಾಡಿದ ಕೆಲವು ಕಾಮೆಂಟ್‌ಗಳಿಂದ ಇದೇ ಶಾಲೆಯ ಮತ್ತೊಬ್ಬ ವಿದ್ಯಾರ್ಥಿನಿ ತನ್ನ ಮಣಿಕಟ್ಟನ್ನು ಸೀಳಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಗೆ ಕೌನ್ಸೆಲಿಂಗ್ ಮಾಡಲಾಗಿದ್ದು, ಈಗ ಆರೋಗ್ಯವಾಗಿದ್ದಾಳೆ ಎಂದು ಸೀತಾಪುರದ ಎಎಸ್‌ಪಿ ಮಾಹಿತಿ ನೀಡಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article