ಕಪ್ಪು ಇರುವೆಗಳ ಆಗಮನ: ಜೋತಿಷ್ಯ ಶಾಸ್ತ್ರದಲ್ಲಿ ಕಪ್ಪು ಇರುವೆಗಳನ್ನು ಶುಭ ಎಂದು ಪರಿಗಣಿಸಲಾಗಿದೆ. ಯಾರೊಬ್ಬರ ಮನೆಯಲ್ಲಿ ಆಕಸ್ಮಿಕವಾಗಿ ಕಪ್ಪು ಇರುವೆಗಳ ದಂಡು ಆಗಮಿಸಿದರೆ, ಶೀಘ್ರದಲ್ಲಿಯೇ ಅವರ ಮನೆಗೆ ತಾಯಿ ಲಕ್ಷ್ಮಿಯ ಆಗಮನವಾಗಲಿದೆ ಎಂದರ್ಥ.
ಕಸಗೂಡಿಸುವವರು ಕಂಡರೆ: ಬೆಳಗ್ಗೆ ಮನೆಯಿಂದ ಹೊರಟು ನೀವು ಎಲ್ಲಿಗಾದರು ಹೊರಟಿರುವಾಗ, ಯಾರಾದರು ಕಸಗೂಡಿಸುವವರು ನಿಮ್ಮ ಕಣ್ಣಿಗೆ ಬಿದ್ದರೆ, ಅದೊಂದು ಶುಭ ಸಂಕೇತವಾಗಿದೆ.
ನಿಮ್ಮ ಮನೆಗೆ ಹಕ್ಕಿ ಬಂದು ಗೂಡು ಕಟ್ಟಿದರೆ ಅದನ್ನು ಮುರಿಯಬೇಡಿ. ಏಕೆಂದರೆ ವಾಸ್ತುದಲ್ಲಿ ಇದನ್ನು ಲಕ್ಷ್ಮಿ ದೇವಿಯ ಆಗಮನದ ಸಂಕೇತವೆಂದು ಪರಿಗಣಿಸಲಾಗಿದೆ. ನಿಮ್ಮ ಮನೆಯಲ್ಲೂ ಹಕ್ಕಿ ಗೂಡು ಕಟ್ಟಿದ್ದರೆ ಅದನ್ನು ತೆಗೆಯುವ ಬದಲು ಮರಕ್ಕೆ ಹಾಕಿ. ತಾಯಿ ಲಕ್ಷ್ಮಿಯು ಇದರಿಂದ ಪ್ರಸನ್ನಳಾಗುತ್ತಾಳೆ.
ವಾಸ್ತು ಶಾಸ್ತ್ರದ ಪ್ರಕಾರ, ತಾಯಿ ಲಕ್ಷ್ಮಿ ಮನೆಗೆ ಪ್ರವೇಶಿಸುವ ಮುನ್ನ ವ್ಯಕ್ತಿಗೆ ಸಂಕೇತಗಳನ್ನು ನೀಡುತ್ತಾಳೆ ಎನ್ನಲಾಗುತ್ತದೆ. ಈ ಸಂಕೇತಗಳಲ್ಲಿ ಕೈಯಲ್ಲಿ ತುರಿಕೆ ಕೂಡ ಶಾಮೀಲಾಗಿದೆ. ವ್ಯಕ್ತಿಯ ಬಲಗೈಯಲ್ಲಿ ತುರಿಕೆ ಕಂಡುಬಂದರೆ, ವ್ಯಕ್ತಿಯ ಜೀವನದಲ್ಲಿ ಹಠಾತ್ ಧನಲಾಭ ಉಂಟಾಗಲಿದೆ ಎಂದರ್ಥ.