-->
ಡಿಸೆಂಬರ್ ತಿಂಗಳು ಈ ರಾಶಿಯವರಿಗೆ ತುಂಬಾ ಒಳ್ಳೆಯದು ಯಾಕೆ ಗೊತ್ತಾ..?

ಡಿಸೆಂಬರ್ ತಿಂಗಳು ಈ ರಾಶಿಯವರಿಗೆ ತುಂಬಾ ಒಳ್ಳೆಯದು ಯಾಕೆ ಗೊತ್ತಾ..?


ವೃಷಭ ರಾಶಿಯ ಜನರು ಡಿಸೆಂಬರ್ ತಿಂಗಳಲ್ಲಿ ವೃತ್ತಿ ಕ್ಷೇತ್ರದಲ್ಲಿ ಕೆಲವು ಹೊಸ ಬದಲಾವಣೆ ಕಾಣಬಹುದು. ನಿಮ್ಮ ನಡವಳಿಕೆಯ ಬಗ್ಗೆ ನೀವು ಹೆಚ್ಚು ಗಮನ ಹರಿಸಬೇಕು.

ಡಿಸೆಂಬರ್ ತಿಂಗಳ ಆರಂಭವು ವ್ಯಾಪಾರಸ್ಥರಿಗೆ ತುಂಬಾ ಒಳ್ಳೆಯದು. ನೀವು ವ್ಯವಹಾರದಲ್ಲಿನ ಕಠಿಣ ಪರಿಶ್ರಮದ ಫಲ ಪಡೆಯುತ್ತೀರಿ. ವ್ಯಾಪಾರ ಪಾಲುದಾರರ ಅಹಂಕಾರವು ಸಮಸ್ಯೆಯನ್ನುಂಟು ಮಾಡಬಹುದು. ಆದ್ದರಿಂದ ಅವರೊಂದಿಗೆ ಎಚ್ಚರಿಕೆಯಿಂದ ಮಾತನಾಡಬೇಕು. ಯಾವುದೇ ಸಮಸ್ಯೆ ಇದ್ದರೆ ಅದನ್ನು ಪರಿಹರಿಸಬೇಕು.

 ಇಲ್ಲದಿದ್ದರೆ ನಿಮ್ಮ ವ್ಯಾಪಾರದಲ್ಲಿ ನಷ್ಟವಾಗಬಹುದು. ಕೋಪ ನಿಯಂತ್ರಿಸುವ ಮೂಲಕ ನೀವು ಪರಿಸ್ಥಿತಿಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ ಮತ್ತು ನಿಮ್ಮ ವ್ಯಾಪಾರವು ಉತ್ತಮವಾಗಿ ಬೆಳೆಯುತ್ತದೆ. ಉತ್ತಮ ಮಾತುಗಳಿಂದ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಸಾಧ್ಯವಾಗುತ್ತದೆ.

ಇನ್ನೂ ಅವಿವಾಹಿತರಾಗಿರುವವರಿಗೆ ವಿವಾಹವಾಗುವ ಅವಕಾಶವಿರುತ್ತದೆ. ಮನೆಯಲ್ಲಿ ಮಂಗಳವಾದ್ಯ ಮೊಳಗಬಹುದು. ಯುವಕರ ಪ್ರೇಮ ಪ್ರಕರಣಗಳಲ್ಲಿ ಪ್ರೀತಿ, ಆಕರ್ಷಣೆಯ ಜೊತೆಗೆ ಪ್ರಣಯದ ಛಾಯೆಯೂ ಮೂಡಲಿದೆ. 

ಈ ತಿಂಗಳು ದೊಡ್ಡ ಹೂಡಿಕೆಗಳನ್ನು ಮಾಡುವುದನ್ನು ತಪ್ಪಿಸುವುದು ಉತ್ತಮ. ಏಕೆಂದರೆ ಹೂಡಿದ ಹಣ ನಷ್ಟವಾಗುವ ಸಾಧ್ಯತೆ ಇರುತ್ತದೆ. ಹಣಕಾಸಿನ ಪರಿಸ್ಥಿತಿ ಸರಿಪಡಿಸಲು ನೀವು ಆದಷ್ಟು ಪ್ರಯತ್ನಿಸಬೇಕು.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article