-->
ವಾಟ್ಸ್ಆ್ಯಪ್ ನಲ್ಲಿ ಬಂದ ಸಂದೇಶ ನೋಡಿ ಫ್ಲೇಮ್ ಲಿಲ್ಲಿ‌ ಗೆಡ್ಡೆ ತಿಂದ ಪೊಲೀಸ್ ಕಾನ್ ಸ್ಟೇಬಲ್ ಅಭ್ಯರ್ಥಿ ಸಾವು: ಮತ್ತೋರ್ವ ಗಂಭೀರ

ವಾಟ್ಸ್ಆ್ಯಪ್ ನಲ್ಲಿ ಬಂದ ಸಂದೇಶ ನೋಡಿ ಫ್ಲೇಮ್ ಲಿಲ್ಲಿ‌ ಗೆಡ್ಡೆ ತಿಂದ ಪೊಲೀಸ್ ಕಾನ್ ಸ್ಟೇಬಲ್ ಅಭ್ಯರ್ಥಿ ಸಾವು: ಮತ್ತೋರ್ವ ಗಂಭೀರ

ತಿರುಪತ್ತೂರು: ವಾಟ್ಸ್ಆ್ಯಪ್ ನಲ್ಲಿ ಬಂದಿರುವ ಸಂದೇಶವನ್ನು ನಂಬಿ ಪ್ಲೇಮ್ ಲಿಲ್ಲಿ ಗಡ್ಡೆ ತಿಂದು ದೇಹದಾರ್ಡ್ಯ ವೃದ್ಧಿಸಲು ಹೋಗಿ  ಪೊಲೀಸ್ ಕಾನ್ ಸ್ಟೇಬಲ್ ಅಭ್ಯರ್ಥಿ ಅಸುನೀಗಿರುವ ಘಟನೆ ಚೆನ್ನೈನ ತಿರುಪತತ್ತೂರಿನಲ್ಲಿ‌ನಡೆದಿದೆ. ಮತ್ತೋರ್ವ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ .

ತಿರುಪತ್ತೂರಿನ ಮಿನ್ನೂರಿನ ಲೋಕನಾಥನ್ ( 25 ) ಮೃತಪಟ್ಟ ದುರ್ದೈವಿ. ತಿರುಪತ್ತೂರಿನ ಸಮೀಪದ ಗ್ರಾಮದ ರತ್ನಂ ಅಸ್ವಸ್ಥತೆಯಿಂದ ಆಸ್ಪತ್ರೆಗೆ ದಾಖಲಾದವರು.

ಇವರಿಬ್ಬರೂ ಖಾಸಗಿ ಕ್ವಾರಿಯೊಂದರಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದರು. ಲೋಕನಾಥನ್ ಪೊಲೀಸ್ ಹುದ್ದೆಗೆ ಸೇರಲು ಆಸಕ್ತಿ ಹೊಂದಿದ್ದರು. ಪೊಲೀಸ್ ಇಲಾಖೆ ನಡೆಸಿರುವ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅವರು ವಾಟ್ಸ್ಆ್ಯಪ್ ಸಂದೇಶವನ್ನು ಓದಿ ಪ್ಲೇಮ್ ಲಿಲ್ಲಿ ಗಡ್ಡೆಯನ್ನು ತಿಂದಿದ್ದಾರೆ. ಜೊತೆಗೆ ರತ್ನಂ ಸಹ ಅದನ್ನು ತಿಂದಿದ್ದಾರೆ. ಆದರೆ ಅದನ್ನು ತಿಂದ ತಕ್ಷಣ ಇಬ್ಬರೂ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾಗಿ ಒದ್ದಾಡುತ್ತಿದ್ದ ಇಬ್ಬರನ್ನು ಕುಟುಂಬಸ್ಥರು ಚಿಕಿತ್ಸೆಗಾಗಿ ವೆಲ್ಲೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆದರೆ ಅಷ್ಟೊತ್ತಿಗಾಗಲೇ ಲೋಕನಾಥನ್ ದೇಹಸ್ಥಿತಿ ಗಂಭೀರವಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಲೋಕನಾಥನ್ ಮೃತಪಟ್ಟಿದ್ದಾರೆ. ಘಟನೆ ಕುರಿತು ಅಂಬೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಾಗಿದೆ.

ಪೊಲೀಸ್ ಪೇದೆಯಾಗುವ ಆಸಕ್ತಿ ಇದ್ದಿದ್ದರಿಂದ ಲೋಕನಾಥನ್ ನಿತ್ಯ ವ್ಯಾಯಾಮ ಮಾಡುತ್ತಿದ್ದರು. ಫಿಟೈಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ದೇಹವನ್ನು ಕಟ್ಟುಮಸ್ತಾಗಿ ಉಳಿಸಿಕೊಳ್ಳಲು ಪ್ಲೇಮ್ ಲಿಲ್ಲಿ ಗಡ್ಡೆ ತಿನ್ನುವಂತೆ ವಾಟ್ಸ್ಆ್ಯಪ್‌ನಲ್ಲಿ ಸಂದೇಶ ಬಂದಿದೆ.  ಅವರಿಬ್ಬರೂ ಅದನ್ನು ತಿಂದಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಈ ಘಟನೆ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article