ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಆಚರಣೆ ಭಕ್ತಾಧಿಗಳಿಂದ ಕ್ಷೇತ್ರದಲ್ಲಿ ಎಡೆಸ್ನಾನ ಸೇವೆ.ಅದ್ದೂರಿಯಾಗಿ ನಡೆದ ಹೂವಿನ ತೇರು ಉತ್ಸವ.

ಸುಬ್ರಹ್ಮಣ್ಯ

ಕುಕ್ಕೆ ಸುಬ್ರಮಣ್ಯದ ಪ್ರಸಿದ್ಧ ಎಡೆಸ್ನಾನ ಸೇವೆಯಲ್ಲಿ ನಿನ್ನೆ ಸುಮಾರು 116 ಭಕ್ತರು ಎಡೆಸ್ನಾನ ಸೇವೆಯನ್ನು ಸ್ವಯಂಪ್ರೇರಿತವಾಗಿ ನೆರವೇರಿಸಿದರು.




ಕುಕ್ಕೆಯ ದೇವರ ನೈವೇದ್ಯವನ್ನು ದೇವಸ್ಥಾನದ ಹೊರಾಂಗಣದಲ್ಲಿ ಗೋವಿಗೆ ತಿನ್ನಿಸಲಾಗುತ್ತದೆ. ಗೋವುಗಳು ತಿಂದು ಉಳಿಸಿದ ಎಲೆಗಳ ಮೇಲೆ ಭಕ್ತಾದಿಗಳು ಉರುಳು ಸೇವೆ ಮಾಡುವ ಸೇವೆಯೇ ಎಡೆಸ್ನಾನ ಸೇವೆ. ಇದರಿಂದಾಗಿ
ಚರ್ಮ ರೋಗಗಳು ಮತ್ತು ಇತರ ರೋಗಗಳಿದ್ದವರು ಈ ಸೇವೆ ನೆರವೇರಿಸಿದರೆ ರೋಗ ಉಪಶಮನವಾಗುತ್ತೆ ಅನ್ನೋ ನಂಬಿಕೆಯನ್ನು ಭಕ್ತರದ್ದು.




ನವೆಂಬರ್ 21ರಿಂದ ಕೊಪ್ಪರಿಗೆ ಏರುವ ಮೂಲಕ ಆರಂಭವಾಗಿರುವ ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಠಿ ಜಾತ್ರಾ ಮಹೋತ್ಸವದಲ್ಲಿ ನಿನ್ನೆ ರಾತ್ರಿ ದೇವರ ಹೂವಿನ ತೇರು ಉತ್ಸವ ನಡೆಯಿತು. ನೂರಾರು ಜನರು ಈ ಉತ್ಸವದಲ್ಲಿ ಪಾಲ್ಗೊಂಡರು. ಇಂದು ನ.28ರ ರಾತ್ರಿ ಪಂಚಮಿ ತೇರು ಉತ್ಸವ ಮತ್ತು ನಾಳೆ 29ಕ್ಕೆ ಚಂಪಾಷಷ್ಠಿ ಮಹಾತೇರು ಉತ್ಸವಗಳು ನಡೆಯುತ್ತವೆ.