-->
1000938341
 ಕರ್ನಾಟಕ ರಾಜ್ಯ ಮುಕ್ತ ವಿ. ವಿ.ಯ ಆಳ್ವಾಸ್ ದೂರಶಿಕ್ಷಣ ಕೇಂದ್ರದ ಪ್ರವೇಶಾತಿ ದಿನಾಂಕ ವಿಸ್ತರಣೆ

ಕರ್ನಾಟಕ ರಾಜ್ಯ ಮುಕ್ತ ವಿ. ವಿ.ಯ ಆಳ್ವಾಸ್ ದೂರಶಿಕ್ಷಣ ಕೇಂದ್ರದ ಪ್ರವೇಶಾತಿ ದಿನಾಂಕ ವಿಸ್ತರಣೆ
ಮೂಡುಬಿದಿರೆ: ಕರ್ನಾಟಕದಲ್ಲಿ ದೂರಶಿಕ್ಷಣಕ್ಕೆ ಯುಜಿಸಿಯಿಂದ ಮಾನ್ಯತೆ ಪಡೆದ ಏಕೈಕ ವಿಶ್ವವಿದ್ಯಾನಿಲಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆಳ್ವಾಸ್ ದೂರಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರದ  2022-23ನೇ ಸಾಲಿನ ಪ್ರವೇಶಾತಿ ದಿನಾಂಕವನ್ನು ವಿಸ್ತರಿಸಲಾಗಿದೆ. ಸ್ನಾತಕ/ ಸ್ನಾತಕೋತ್ತರ ಕೋರ್ಸಗಳಾದ ಬಿಎ, ಬಿಕಾಂ, ಬಿಬಿಎ, ಬಿಎಸ್ಸಿ, ಎಂಎ, ಎಂಸಿಜೆ, ಎಂಕಾA, ಬಿಎಲ್‌ಐಎಸ್ಸಿ, ಎಂಎಲ್‌ಐಎಸ್ಸಿ, ಎಂಎಸ್ಸಿ, ಎಂಬಿಎ,  ಪಿಜಿ ಸರ್ಟಿಫಿಕೆಟ್ ಪ್ರೋಗ್ರಾಮ್ಸ್, ಡಿಪ್ಲೊಮಾ ಪ್ರೋಗ್ರಾಮ್ಸ್,  ಸರ್ಟಿಫಿಕೆಟ್ ಪ್ರೋಗ್ರಾಮ್ಸ್, ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರವೇಶಾತಿಗೆ  ಅಂತಿಮ ದಿನಾಂಕವನ್ನು ನವೆಂಬರ್ 15 ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಪ್ರಾದೇಶಿಕ ನಿರ್ದೇಶಕರು  ತಿಳಿಸಿದ್ದಾರೆ. 

ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ

ಎರಡು ಶೈಕ್ಷಣಿಕ ಕರ‍್ಯಕ್ರಮಗಳನ್ನು (ಕೋರ್ಸುಗಳನ್ನು) ಏಕಕಾಲದಲ್ಲಿ ಓದಲು ಅವಕಾಶವಿದ್ದು, ಒಂದು ಭೌತಿಕ ಕ್ರಮದಲ್ಲಿ ಮತ್ತೊಂದು ದೂರ ಶಿಕ್ಷಣ ಕ್ರಮದಲ್ಲಿ ಡಿಗ್ರಿಯನ್ನು ಪಡೆಯಬಹುದಾಗಿದೆ.  ಆಸಕ್ತರು 7090715010, 9591546202 ದೂರವಾಣಿ ಸಂಖ್ಯೆ ಮೂಲಕ ಅಥವಾ ಆಳ್ವಾಸ್ ಪದವಿ ಕಾಲೇಜು ಕಟ್ಟಡದಲ್ಲಿರುವ ಆಳ್ವಾಸ್ ಕಲಿಕಾರ್ಥಿ ಸಹಾಯ ಕೇಂದ್ರವನ್ನು   ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ Email: administration@alvas.org ಸಂಪರ್ಕಿಸಬಹುದು.
Ads on article

Advertise in articles 1

advertising articles 2

Advertise under the article