2023 ರಲ್ಲಿ ಶನೀಶ್ವರ ದೇವರು ಅತಿಯಾಗಿ ಕಾಡುವ ರಾಶಿಗಳು ಯಾವುವು ಗೊತ್ತಾ?


ಮೇಷ ರಾಶಿ : 2023ರಲ್ಲಿ, ಮೇಷ ರಾಶಿಯವರ ಖರ್ಚು ಹೆಚ್ಚಾಗುತ್ತದೆ. ಕುಟುಂಬದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮನಸ್ಥಿತಿ ಸರಿಯಾಗಿರುವುದಿಲ್ಲ. ಆರೋಗ್ಯ ಹದಗೆಡಬಹುದು. ಏನೇ ಮಾಡಿದರೂ ಯಶಸ್ಸು ಕೈ ತಪ್ಪುತ್ತಲೇ ಇರಬಹುದು. ಅನಾವಶ್ಯಕ ಪ್ರಯಾಣಗಳು ಎದುರಾಗಲಿವೆ. 


ಸಿಂಹ ರಾಶಿ : ಸಿಂಹ ರಾಶಿಯವರು ಕೂಡಾ 2023ರಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಕೆಲಸದ ಒತ್ತಡ ಹೆಚ್ಚುತ್ತದೆ. ಕುಟುಂಬ ಸದಸ್ಯರಿಂದಲೇ ಮಾನಸಿಕ ನೋವೂ ಉಂಟಾಗಬಹುದು. ನಿಮ್ಮ ಕೈಯ್ಯಲ್ಲಿರುವ ಹಣವನ್ನು ಆದಷ್ಟು ಬೇಗ ಹೂಡಿಕೆ ಮಾಡುವುದು ಉತ್ತಮ. 


ಧನು ರಾಶಿ : ಈ ರಾಶಿಯವರಿಗೆ ಶನಿ ಸಾಡೇ ಸಾತಿಯಿಂದ ಮುಕ್ತಿ ಸಿಕ್ಕಿದರೂ, ಸ್ವಲ್ಪ ಸಮಯ ಯಾತನಾಮಯವಾಗಿಯೇ ಉಳಿಯಬಹುದು. ವೃತ್ತಿ ಜೀವನದಲ್ಲಿ ಅಡೆತಡೆಗಳು ಎದುರಾಗಬಹುದು. ಖರ್ಚು ಹೆಚ್ಚುತ್ತಲೇ ಇರುತ್ತದೆ. ಅಪಾಯಕಾರಿ ಹೂಡಿಕೆಗಳಿಂದ ಸಾಧ್ಯವಾದಷ್ಟು ದೂರವಿರಿ. 
BREAKING NEWS
Loading latest news...
Join our WhatsApp Channel Powered By : Online Pudu