ಕುಡ್ಲ To ಕಾಶ್ಮೀರಕ್ಕೆ ಯುವಕರಿಬ್ಬರ ಸೈಕ್ಲಿಂಗ್ ಯಾತ್ರೆ! ಸೈಕ್ಲಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಲು ಹೊರಟ ಕುಡ್ಲದ ಕುವರರು...!!


ಸೈಕ್ಲಿಂಗ್ ಮೂಲಕ ಮಂಗಳೂರಿನಿಂದ ಕಾಶ್ಮೀರಕ್ಕೆ ಯಾತ್ರೆ ಹೊರಟ ಜಗದೀಶ್ ಕುಲಾಲ್ ಹಾಗೂ ಶ್ರೀನಿಧಿ ಶೆಟ್ಟಿ ಅವರನ್ನು ಬೆಳಗಾಂ ಅಬಕಾರಿ ಇಲಾಖೆಯ ಎಸ್ ಪಿ ವಿಜಯಕುಮಾರ್ ಹಿರೇಮಂತ್ ಹಾಗೂ ಬೆಳಗಾಂ ಪೆಡಲರ್ಸ್ ಕ್ಲಬ್ ನ ಅಧ್ಯಕ್ಷರು ಸ್ವಾಗತಿಸಿದರು.
ಮಂಗಳೂರಿನಿಂದ ಕಾಶ್ಮೀರಕ್ಕೆ ಯಾತ್ರೆ ಹೊರಟ ಈ ತಂಡ ಗುರುವಾರದಂದು ಬೆಳಗಾಂ ಮೂಲಕ ಹಾದು ಹೋಯಿತು. 
ಸೈಕ್ಲಿಂಗ್ ಕ್ಷೇತ್ರದ ಸಾಧನೆಯ ಮೂಲಕ ಈ ವಿಶೇಷ ಜಾತದಲ್ಲಿ ಪರಿಸರ ಸಂರಕ್ಷಣೆ, ಆರೋಗ್ಯ ಹಾಗೂ ಅಂಗಾಂಗ ದಾನಗಳ ಅರಿವು ಮೂಡಿಸುವುದು ಇವರ ಗುರಿಯಾಗಿದೆ.