-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Subrahmanya :- ಕುಕ್ಕೆಯಲ್ಲಿ ಹೊರಾಂಗಣ ಉತ್ಸವಾದಿಗಳು ಆರಂಭ.

Subrahmanya :- ಕುಕ್ಕೆಯಲ್ಲಿ ಹೊರಾಂಗಣ ಉತ್ಸವಾದಿಗಳು ಆರಂಭ.

ಸುಬ್ರಹ್ಮಣ್ಯ

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ದೀಪಾವಳಿಯ ಬಲಿಪಾಡ್ಯಮಿಯಂದು ಅಂದರೆ ಇಂದಿನಿಂದ  ಶ್ರೀ ದೇವರ ಹೊರಾಂಗಣ ಪ್ರವೇಶವಾಗುವ ಮೂಲಕ ಹೊರಾಂಗಣ ಉತ್ಸವಾದಿಗಳು ಆರಂಭವಾಗಲಿದೆ.

ಇಂದು ದೀಪಾವಳಿ ಪ್ರಯುಕ್ತ ಪಾಲಕಿ ಮತ್ತು ಬಂಡಿ ಉತ್ಸವಗಳೂ ನೆರವೇರುತ್ತದೆ. ಈ ಮೂಲಕ ಕುಕ್ಕೆ ಕ್ಷೇತ್ರದಲ್ಲಿ  ಶ್ರೀ ಸುಬ್ರಹ್ಮಣ್ಯ ದೇವರ ಹೊರಾಂಗಣ ವರ್ಷಾವಧಿ ಉತ್ಸವಗಳು ಆರಂಭವಾಗುತ್ತದೆ. 

ದೀಪಾವಳಿಯ ಮುಂದಿನ ದಿನಗಳಲ್ಲಿ ದೇವಳದಲ್ಲಿ  ಶ್ರೀ ದೇವರ ಪಾಲಕಿ ಉತ್ಸವ, ಭಂಡಿ ಉತ್ಸವ ಹಾಗೂ ಮಂಟಪೋತ್ಸವ ಸೇವೆಗಳು ನಡೆಯುತ್ತದೆ. ಮುಂದೆ ಬರುವ ಲಕ್ಷದೀಪೋತ್ಸವದ ನಂತರ ಕ್ಷೇತ್ರದ ರಥಬೀದಿಯಲ್ಲಿ ರಥೋತ್ಸವಗಳು ನಡೆಯಲಿದೆ. 

ನಾಡಿನ ಉಳಿದ ದೇವಾಲಯಗಳಲ್ಲಿ ಪತ್ತನಾಜೆಯಂದು ಕೊನೆಯ ಉತ್ಸವವಾಗಿ ಉತ್ಸವ ಮೂರ್ತಿಯು ಗರ್ಭಗುಡಿಯನ್ನು ಪ್ರವೇಶಿಸುವುದರೊಂದಿಗೆ ಉತ್ಸವಗಳು ಕೊನೆಯಾಗುತ್ತದೆ. ಆದರೆ ಕುಕ್ಕೆಯಲ್ಲಿ ಮಾತ್ರ ಜೇಷ್ಠ ಶುದ್ಧಷಷ್ಠಿಯಂದು ಕೊನೆಯ ಉತ್ಸವವು ನಡೆದು, ದೀಪಾವಳಿಯ ಅಮವಾಸ್ಯೆಯಂದು ಉತ್ಸವ ಆರಂಭವಾಗುತ್ತದೆ.  


ಕಾರ್ತಿಕ ಮಾಸದ ಪ್ರಥಮ ದಿನವಾದ ಇಂದು ನಾಡಿನ ಎಲ್ಲಾ ದೇವಾಲಯಗಳಲ್ಲೂ ಉತ್ಸವಗಳು ಆರಂಭವಾಗುತ್ತದೆ. ಅದೇ ರೀತಿ ಕುಕ್ಕೆಯಲ್ಲೂ ಹೊರಾಂಗಣ ಉತ್ಸವಗಳೂ ಆರಂಭಗೊಳ್ಳುತ್ತದೆ. 


ದೇವಳದ ಹೊರಾಂಗಣದಲ್ಲಿ ಆನೆ, ಬಿರುದಾವಳಿ, ಮಂಗಳವಾದ್ಯಗಳ ನಿನಾದದೊಂದಿಗೆ ಶ್ರೀ ಸುಬ್ರಹ್ಮಣ್ಯ ದೇವರ ಉತ್ಸವಾಧಿಗಳು ನೆರವೇರುತ್ತದೆ.ಈ ಸಮಯದಲ್ಲಿ ಸಹಸ್ರಾರು ಭಕ್ತಾಧಿಗಳು ಶ್ರೀ ದೇವರ ಉತ್ಸವವನ್ನು ವೀಕ್ಷಿಸಿ ಕೃತಾರ್ಥರಾಗುತ್ತಾರೆ. 


ಕಾರ್ತಿಕ ಮಾಸದಲ್ಲಿ ಬರುವ ಲಕ್ಷ ದೀಪೋತ್ಸವದ ನಂತರ ರಥಬೀದಿಯಲ್ಲಿ ಉತ್ಸವಗಳು ಆರಂಭಗೊಳ್ಳಲಿದೆ. ಈ ಮೊದಲು ದೇವಳದಲ್ಲಿ ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಗೋಪೂಜೆ ಮತ್ತು ಲಕ್ಷ್ಮೀ ಪೂಜೆಗಳೂ ನೆರವೇರುತ್ತದೆ.


.

Ads on article

Advertise in articles 1

advertising articles 2

Advertise under the article

ಸುರ