ಅಕ್ಟೊಬರ್ 25 ರಂದು ಸೂರ್ಯಗ್ರಹಣದ ಹಿನ್ನಲೆಯಲ್ಲಿ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಯಾವುದೇ ಸೇವೆ, ಭೋಜನ ಪ್ರಸಾದ ಇರುವುದಿಲ್ಲ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಕುಕ್ಕೆಯಲ್ಲಿ ಅಕ್ಟೊಬರ್ 25ರಂದು ಭೋಜನ ಪ್ರಸಾದ ಸೇವೆ ಸೇರಿದಂತೆ ಭಕ್ತರಿಗೆ ದೇವರ ಯಾವುದೇ ಸೇವೆಗಳೂ ಲಭ್ಯ ಇರುವುದಿಲ್ಲ.
ಅಕ್ಟೋಬರ್ 26ರಂದು ದೇವರ ನಿತ್ಯದ ಪೂಜಾ ಸಮಯಗಳಲ್ಲಿ ವ್ಯತ್ಯಯವಾಗುವುದರಿಂದ ಕುಕ್ಕೆ ಸುಬ್ರಮಣ್ಯದಲ್ಲಿ ಬೆಳಗ್ಗೆ 9ರಿಂದ ಭಕ್ತರಿಗೆ ದೇವರ ದರ್ಶನ, ಸೇವೆಗಳು ಆರಂಭಗೊಳ್ಳಲಿವೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ. ಈ ದಿನ ದೇವರ ನಿತ್ಯ ಪೂಜಾ ಸಮಯಗಳಲ್ಲಿ ವ್ಯತ್ಯಯವಾಗುವುದರಿಂದ ಭಕ್ತರಿಗೆ ಬೆಳಗ್ಗೆ 9 ಗಂಟೆಯಿಂದ ದೇವರ ದರ್ಶನಕ್ಕೆ ಸಮಯ ನಿಗದಿಪಡಿಸಲಾಗಿದೆ.