ಸಿವಿಲ್ ಸರ್ವಿಸ್ ಹುದ್ದೆಗಳ ನೇಮಕಾತಿ!! ಕೆಪಿಎಸ್ಸಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟ...

  

2021ನೇ ಸಾಲಿನ ಕೆಪಿಎಸ್‌ಸಿ ಪರೀಕ್ಷೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ನವೆಂಬರ್ 06 ರಂದು ಪರೀಕ್ಷೆ ನಡೆಸಲು ದಿನಾಂಕ ನಿಗದಿಪಡಿಸಿದೆ.


ರಾಜ್ಯೇತರ ಸಿವಿಲ್ ಸೇವೆಗಳ ಹುದ್ದೆಗೆ ಪರೀಕ್ಷೆ ದಿನಾಂಕ  ಈ ಕೆಳಗಿನಂತಿವೆ.
06-11-2022 ಬೆಳಿಗ್ಗೆ 10.00 ರಿಂದ 12-00 ಗಂಟೆವರೆಗೆ ಸಾಮಾನ್ಯ ಅಧ್ಯಯನ ಪತ್ರಿಕೆ-1

ಮಧ್ಯಾಹ್ನ 02-00 ರಿಂದ 04-00 ಗಂಟೆವರೆಗೆ ಸಾಮಾನ್ಯ ಅಧ್ಯಯನ ಪತ್ರಿಕೆ-2


ಈ ಹುದ್ದೆಗಳಿಗೆ ಪತ್ರಿಕೆ-1, ಪತ್ರಿಕೆ-2 ಪರೀಕ್ಷೆ ಇರುತ್ತವೆ. ಪ್ರತಿ ಪತ್ರಿಕೆಯು 2.00 ಗಂಟೆಗಳ ಅವಧಿಯದ್ದಾಗಿರುತ್ತದೆ. ಪ್ರತಿ ಪತ್ರಿಕೆಯನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆಯಲು ಅವಕಾಶ ನೀಡಲಾಗಿರುತ್ತದೆ. 


ಪ್ರತಿ ಪ್ರಶ್ನೆ ಪತ್ರಿಕೆಯು 100 ಪ್ರಶ್ನೆಗಳನ್ನು ಒಳಗೊಂಡಿದ್ದು, ಪ್ರಶ್ನೆಗೆ 02 ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ. ಒಂದು ತಪ್ಪು ಉತ್ತರಕ್ಕೆ 1/4 ರಷ್ಟು ಅಂಕಗಳನ್ನು ಕಳೆಯಲಾಗುತ್ತದೆ