-->
Kadaba-ಕಡಬ ತಾಲೂಕಿನ ಎರಡು ಕಡೆ ಪೊಲೀಸರ ದಾಳಿ!! ಗ್ರಾಮೀಣ ಪ್ರದೇಶದಲ್ಲಿ ಗಾಂಜಾ ಘಾಟು-ಇಬ್ಬರ ಬಂಧನ!!

Kadaba-ಕಡಬ ತಾಲೂಕಿನ ಎರಡು ಕಡೆ ಪೊಲೀಸರ ದಾಳಿ!! ಗ್ರಾಮೀಣ ಪ್ರದೇಶದಲ್ಲಿ ಗಾಂಜಾ ಘಾಟು-ಇಬ್ಬರ ಬಂಧನ!!

ಕಡಬ

ಗಾಂಜಾ ಮಾಫಿಯ ಪ್ರಕರಣಗಳು ಗ್ರಾಮೀಣ ಭಾಗಕ್ಕೂ ಎಂಟ್ರಿ ಕೊಟ್ಟಿದ್ದು, ಕಡಬ ಪಟ್ಟಣದ ಸಮೀಪ ಪ್ರದೇಶದಲ್ಲಿ ಇಬ್ಬರ ಬಂಧನ ನಡೆದಿದ್ದು,ಉಳಿದವರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕಡಬ ಠಾಣಾ ವ್ಯಾಪ್ತಿಯಲ್ಲಿ ಠಾಣಾಧಿಕಾರಿ ಆಂಜನೇಯ ರೆಡ್ಡಿ ಗಸ್ತಿನಲ್ಲಿದ್ದಾಗ ಇಲ್ಲಿನ ಕಳಾರ ಸಮೀಪದ ಮಸೀದಿ ಬಳಿಯ ಅಂಗಡಿಯ ಪಕ್ಕದಲ್ಲಿ ಓರ್ವ ಗಾಂಜಾ ಸೇವಿಸಿ ತೂರಾಟ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಸ್ಥಳಕ್ಕೆ ತೆರಳಿದ್ದು,ಮಾದಕ ವಸ್ತು ಸೇವಿಸಿರುವುದು ಅನುಮಾನ ಬರುತ್ತಿದ್ದಂತೆ ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.

ಇನ್ನೊಂದು ಪ್ರಕರಣವು ಮರ್ದಾಳದಲ್ಲಿ ನಡೆದಿದ್ದು, ಮರ್ದಾಳ ಮಸೀದಿಯ ಬಳಿಯ ಆಟೋ ರಿಕ್ಷಾ ನಿಲ್ದಾಣದ ಪಕ್ಕದಲ್ಲಿ ವ್ಯಕ್ತಿಯೋರ್ವ ಅಮಲು ಪದಾರ್ಥ ಸೇವಿಸಿ ತೂರಾಡುತ್ತಿದ್ದಾನೆ ಎನ್ನುವ ಸಾರ್ವಜನಿಕರ ಮಾಹಿತಿಯ ಆಧಾರದಲ್ಲಿ ಸ್ಥಳಕ್ಕೆ ತೆರಳಿ ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ.

ಗಾಂಜಾ ಸೇವಿಸಿರುವ ವಿಚಾರ ವೈದ್ಯರ ವರದಿಯಿಂದ ದೃಢಪಡುತ್ತಿದ್ದಂತೆ ಇಬ್ಬರನ್ನೂ ಬಂಧಿಸಲಾಗಿದ್ದು, ಬಂಧಿತ ಆರೋಪಿಗಳನ್ನು ಬಂಟ್ರ ಪಿಲಿಮಜಲು ಮರುವಂತಿಲ ನಿವಾಸಿ ಮಹಮ್ಮದ್ ಶಾಫಿ(35) ಹಾಗೂ ಕಳಾರ ಕಾಲನಿ ನಿವಾಸಿ ಮಹಮ್ಮದ್ ತ್ವಾಹ(18) ಎಂದು ಗುರುತಿಸಲಾಗಿದೆ.ಸದ್ಯ ಬಂಧಿತರಿಂದ ಉಳಿದವರ ಬಗ್ಗೆ ಹಾಗೂ ಗಾಂಜಾ ಪೂರೈಸುವ ತಂಡದ ಬಗ್ಗೆ ತನಿಖೆ ನಡೆದಿದ್ದು, ಗ್ರಾಮೀಣ ಭಾಗಕ್ಕೆ ಎಂಟ್ರಿ ಪಡೆದ ಗಾಂಜಾ ಮಾಫಿಯಕ್ಕೆ ಬ್ರೇಕ್ ಹಾಕಲು ಠಾಣಾಧಿಕಾರಿ ಹಾಗೂ ಸಿಬ್ಬಂದಿ ವರ್ಗ ಠಾಣಾ ವ್ಯಾಪ್ತಿಯಲ್ಲಿ ಗಸ್ತು ಹಾಗೂ ನೈಟ್ ರೌಂಡ್ಸ್ ಬಿಗಿಗೊಳಿಸಿದೆ.(ಸಾಂಧರ್ಭಕ ಚಿತ್ರ )

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article