ಆರ್ಥಿಕ-ಸಾಂಖ್ಯಿಕ ಇಲಾಖೆಯಲ್ಲಿ ಉದ್ಯೋಗಾವಕಾಶ: ಅಭ್ಯರ್ಥಿಗಳಿಗೆ ಇಲ್ಲಿದೆ ಉಪಯುಕ್ತ ಮಾಹಿತಿ

ಆರ್ಥಿಕ-ಸಾಂಖ್ಯಿಕ ಇಲಾಖೆಯಲ್ಲಿ ಉದ್ಯೋಗಾವಕಾಶ: ಅಭ್ಯರ್ಥಿಗಳಿಗೆ ಇಲ್ಲಿದೆ ಉಪಯುಕ್ತ ಮಾಹಿತಿ




KPSC ಕರ್ನಾಟಕ ಲೋಕಸೇವಾ ಆಯೋಗ ಯುವ ಉದ್ಯೋಗಾಂಕ್ಷಿಗಳಿಗೆ ಹೊಸ ಅವಕಾಶದ ಬಾಗಿಲು ತೆರೆದಿದೆ. 

ರಾಜ್ಯ ಸರ್ಕಾರದ 'ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ'ಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಸೇರಿದ ವೃಂದದ ಗ್ರೂಪ್ 'ಸಿ' ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 

ಹುದ್ದೆಗಳ ವಿವರ

ಗಣತಿದಾರರು ಮತ್ತು ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳು : ಒಟ್ಟು 13 ಹುದ್ದೆಗಳು

ಈ ಬಗ್ಗೆ ಅರ್ಜಿ ಆಹ್ವಾನಿಸಿ ಅಧಿಸೂಚನೆಯನ್ನೂ ಹೊರಡಿಸಲಾಗಿದೆ. 

ಅಧಿಸೂಚನೆಯ ವಿವರಗಳು ಹೀಗಿವೆ.

ಕೇವಲ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 11, 2022ರಂದು ಕೊನೆ ದಿನವಾಗಿದೆ. 

ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದು. 

ಅರ್ಜಿ ಶುಲ್ಕ:  ಸಾಮಾನ್ಯ ಅಭ್ಯರ್ಥಿಗಳಿಗೆ ₹600, ಒಬಿಸಿ ಅಭ್ಯರ್ಥಿಗಳಿಗೆ ₹300. SC, ST  ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.  

ವಿದ್ಯಾರ್ಹತೆ: PUC (10+2) ಯಾ ತತ್ಸಮಾನ

ವಯೋಮಿತಿ: ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ. ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ವೇತನ ಶ್ರೇಣಿ ₹ 21,400- ₹42000 

ಆಯ್ಕೆ ವಿಧಾನ: ಮೊದಲನೆ ಹಂತ ಕನ್ನಡ ಭಾಷಾ ಪರೀಕ್ಷೆ. ಎರಡನೆಯ ಹಂತ ಸ್ಪರ್ಧಾತ್ಮಕ ಪರೀಕ್ಷೆ.  ಎಲ್ಲಾ ಅಭ್ಯರ್ಥಿಗಳಿಗೆ ಕನ್ನಡ ಭಾಷೆಯ ಪರೀಕ್ಷೆ ಬರೆಯುವುದು ಕಡ್ಡಾಯ. 

ಈ ಎಲ್ಲ ಹಂತಗಳ ಪರೀಕ್ಷೆ ದಿನವನ್ನು ಕೆಪಿಎಸ್‌ಸಿ ಜಾಲತಾಣ kpsc.kar.nic.in ನಲ್ಲಿ ಪ್ರಕಟಿಸಲಾಗುವುದು. ಹಾಗಾಗಿ ಅಭ್ಯರ್ಥಿಗಳು ನಿಯಮಿತವಾಗಿ ಜಾಲತಾಣವನ್ನು  ಪರಿಶೀಲಿಸುತ್ತಿರಬೇಕು. 

ನಿರ್ದಿಷ್ಟ ಮೀಸಲಾತಿ ಬಯಸಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅದಕ್ಕೆ ಮೀಸಲಾಗಿರುವ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.

ಅಧಿಸೂಚನೆಗಾಗಿ  https://kpsc.kar.nic.in ಲಿಂಕ್ ನೋಡಿ.