ಅಮೇರಿಕದ ಶಾಲೆಯಲ್ಲಿ ಗುಂಡಿನ ದಾಳಿಗೆ ಮಹಿಳೆ, ಯುವತಿ ಸೇರಿದಂತೆ ಮೂವರು ಬಲಿ

ಸೆಂಟ್ ಲೂಯಿಸ್: ಅಮೆರಿಕದ ಸೆಂಟ್ ಲೂಯಿಸ್‌ ಹೈಸ್ಕೂಲ್ ನ ಸೆಂಟ್ರಲ್ ವಿಶ್ವಲ್ ಆ್ಯಂಡ್ ಪರ್ಫಾರ್ಮಿಂಗ್ ಆರ್ಟ್ಸ್ ನಲ್ಲಿ ಸೋಮವಾರ ಬೆಳಗ್ಗೆ ನಡೆದ ಗುಂಡಿನ ದಾಳಿಯಲ್ಲಿ ಮಹಿಳೆ, ಯುವತಿ ಸೇರಿದಂತೆ ಮೂವರು ಮೃತಪಟ್ಟು ಆರು ಮಂದಿ ಗಾಯಗೊಂಡಿದ್ದಾರೆ.

ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸರು ದಾಳಿಕೋರನನ್ನು ಕೊಂದಿದ್ದಾರೆ. ಈ ಗುಂಡಿನ ದಾಳಿ ನಡೆದ ಸಂದರ್ಭ ವಿದ್ಯಾರ್ಥಿಗಳು ಭೀತಿಯಿಂದ ತರಗತಿಗಳ ಬಾಗಿಲು ಮುಚ್ಚಿಕೊಂಡು ಮೂಲೆ ಮೂಲೆಗಳಲ್ಲಿ ಅವಿತುಕೊಳ್ಳಬೇಕಾಯಿತು. ಕೆಲವರು ಕಿಟಕಿಗಳಿಂದ ಹಾರಿ ತಪ್ಪಿಸಿಕೊಂಡಿದ್ದಾರೆ. ದಾಳಿಕೋರ ತನ್ನತ್ತ ನೋಡಿ ಬಂದೂಕು ಗುರಿ ಇಟ್ಟಿದ್ದ. ಆದರೆ ಬಂದೂಕು ಜಾಮ್ ಆಗಿದ್ದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು ಎಂದು ಭೀತಿಯಿಂದ ವಿದ್ಯಾರ್ಥಿನಿಯೊಬ್ಬಳು ವಿವರಿಸಿದ್ದಾಳೆ.

ದಾಳಿಕೋರ ಸುಮಾರು 20ವರ್ಷ ವಯಸ್ಸಿನವನಾಗಿದ್ದ ಎಂದು ಪೊಲೀಸ್ ಆಯುಕ್ತ ಮೈಕೆಲ್ ಸ್ಯಾಕ್ ಹೇಳಿದ್ದಾರೆ. ದಾಳಿಕೋರ ಅಥವಾ ಸಂತ್ರಸ್ತರ ಹೆಸರು ಬಹಿರಂಗಪಡಿಸದ ಅವರು, ಮೃತಪಟ್ಟ ಮಹಿಳೆ ಶಿಕ್ಷಕಿಯೇ ಎಂಬ ಕೇಳಿದ ಪ್ರಶ್ನೆಗೂ ಉತ್ತರಿಸಲು ಅವರು ನಿರಾಕರಿಸಿದರು. ಈ ಬಗ್ಗೆ ವರದಿ ಮಾಡಿದೆ.
BREAKING NEWS
Loading latest news...
Join our WhatsApp Channel Powered By : Online Pudu