-->

ಮಂಗಳೂರು: ಲಂಚ ಸ್ವೀಕಾರ ಪ್ರರಕಣ; ಮಂಗಳೂರು ತಹಶಿಲ್ದಾರ್ ಗೆ ಜಾಮೀನು ನಿರಾಕರಣೆ

ಮಂಗಳೂರು: ಲಂಚ ಸ್ವೀಕಾರ ಪ್ರರಕಣ; ಮಂಗಳೂರು ತಹಶಿಲ್ದಾರ್ ಗೆ ಜಾಮೀನು ನಿರಾಕರಣೆ

ಮಂಗಳೂರು: ಲಂಚ ಸ್ವೀಕಾರ ಪ್ರಕರಣದ ಆರೋಪಿಗಳಾದ ಮಂಗಳೂರು ತಹಶಿಲ್ದಾರ್ ಪುರಂದರ ಹೆಗ್ಡೆ ಹಾಗೂ ಆತನ ಸಹಾಯಕ ಶಿವಾನಂದ ನಾಟೇಕರ್ ಗೆ ಜಾಮೀನು ನಿರಾಕರಿಸಿರುವ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ಮಂಗಳೂರು ಮಿನಿ ವಿಧಾನಸೌಧಕ್ಕೆ ದಾಳಿ ಮಾಡಿರುವ ದ.ಕ.ಜಿಲ್ಲಾ ಲೋಕಾಯುಕ್ತ ಪೊಲೀಸರು ಲಂಚ ಸ್ವೀಕಾರ ಮಾಡುತ್ತಿರುವಾಗಲೇ ಮಂಗಳೂರು ತಹಶಿಲ್ದಾರ್ ಸಹಾಯಕ ಅಧಿಕಾರಿಯನ್ನು ಶುಕ್ರವಾರ ಬಂಧಿಸಿತ್ತು. ಆತನನ್ನು ವಿಚಾರಣೆ ನಡೆಸಿದಾಗ ತಾನು ತಹಶಿಲ್ದಾರ್ ಅವರಿಗಾಗಿ ಲಂಚ ಸ್ವೀಕಾರ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ‌. ಆದ್ದರಿಂದ ಲೋಕಾಯುಕ್ತ ಪೊಲೀಸರು ಮಂಗಳೂರು ತಹಶಿಲ್ದಾರ್ ಪುರಂದರ ಹೆಗ್ಡೆಯನ್ನೂ ಬಂಧಿಸಿದ್ದರು.

ಹಿರಿಯ ನಾಗರಿಕರೊಬ್ಬರು ತಮ್ಮ ಜಾಗ ಮಾರಾಟ ಮಾಡುವುದಕ್ಕಾಗಿ ಎನ್ಒಸಿ ಪಡೆಯಲು ಆಗಮಿಸಿದ ವೇಳೆ ಆರೋಪಿ ಶಿವಾನಂದ ನಾಟೆಕರ್ 2,000 ರೂ. ಲಂಚ ಪಡೆದು ಹೆಚ್ಚಿನ 10 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ. ಬಳಿಕ ಅವರ ಮನವಿಯಂತೆ 5,000 ರೂ‌. ಗೆ ಒಪ್ಪಿಗೆ ಸೂಚಿಸಿದ್ದ. ಈ ಬಗ್ಗೆ ಹಿರಿಯ ನಾಗರಿಕರು ಲೋಕಾಯುಕ್ತಕ್ಕೆ ಮಾಹಿತಿ ನೀಡಿದ್ದರು. ಅದರಂತೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಶಿವಾನಂದ ನಾಟೆಕರ್ ಲಂಚ ಸ್ವೀಕರಿಸುತ್ತಿರುವಾಗಲೇ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ‌.

Ads on article

Advertise in articles 1

advertising articles 2

Advertise under the article