ಮಂಗಳೂರು: 'ನಮೀಬಿಯಾ ಚೀತಾ' ಗರ್ಭಿಣಿ ಬಗ್ಗೆ ಎಫ್ ಬಿ ಪೋಸ್ಟ್; ಸುನಿಲ್ ಬಜಿಲಕೇರಿ ಅರೆಸ್ಟ್

ಮಂಗಳೂರು: ನಮೀಬಿಯಾ ಚೀತಾ ಗರ್ಭಿಣಿಯಾಗಿರುವ ಬಗ್ಗೆ ಫೇಸ್ ಬುಕ್ ಪೋಸ್ಟ್ ಮೂಲಕ ಗರ್ಭಿಣಿ ಮಹಿಳೆಗೆ ಅವಮಾನ ಆರೋಪದ ದೂರಿನಡಿ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಸುನೀಲ್ ಬಜಿಲಕೇರಿಯನ್ನು ಮಂಗಳೂರಿನ ಬಜ್ಪೆ ಪೊಲೀಸರು ರಾತ್ರೋರಾತ್ರಿ ಬಂಧಿಸಿದ್ದಾರೆ. 

ನಮೀಬಿಯಾ ಚೀತಾ ಗರ್ಭ ಧಾರಣೆ ಬಗ್ಗೆ ಅವಹೇಳನಕಾರಿಯಾಗಿ ಸುನಿಲ್ ಬಜಿಲಕೇರಿ ಬರಹ ಬರೆದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ‌'ನಮೀಬಿಯಾ ಚೀತಾಗೆ ಸೀಮಂತ ಯಾವಾಗ?' ಎಂದು ಗರ್ಭಿಣಿಯ ಫೋಟೋಗೆ ಚೀತಾದ ಮುಖವನ್ನು ಎಡಿಟ್ ಮಾಡಿ ಅವರು ಪೋಸ್ಟ್ ಮಾಡಿದ್ದರು. ಇದು ಗರ್ಭಿಣಿ ಹಾಗೂ ಭಾರತೀಯ ಸಂಸ್ಕೃತಿಗೆ ಅವಹೇಳನ ಅಂತ ಎಡಪದವು ಗ್ರಾಮದ ಮಹಿಳೆಯೋರ್ವರು ಪೊಲೀಸ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸುನೀಲ್ ಬಜಿಲಕೇರಿ ಬಂಧನವಾಗಿದೆ.



ಬಿಜೆಪಿ ಹಾಗೂ ಸರ್ಕಾರದ ವಿರುದ್ಧ ಸದಾ ಟೀಕಾಪ್ರಹಾರ ಮಾಡುತ್ತಿದ್ದ ಸುನೀಲ್ ಬಜಿಲಕೇರಿ, ತನ್ನ ಸಾಮಾಜಿಕ ತಾಣಗಳಲ್ಲಿ ಹಲವು ಬಿಜೆಪಿ ನಾಯಕರ ಬಗ್ಗೆ ಟೀಕೆ ಮಾಡಿದ್ದರು.‌ ಪ್ರಧಾನಿ ನರೇಂದ್ರ ಮೋದಿ ನಮೀಬಿಯಾದಿಂದ ತಂದಿದ್ದ ಚೀತಾದ ಹೆಸರಲ್ಲಿ ಮತ್ತೆ ಅವಹೇಳನದ ಪೋಸ್ಟ್ ಮಾಡಿದ್ದಾರೆ. ಈ ಹಿಂದೆ ಹಿಂದೂ ಸಂಘಟನೆಯಲ್ಲಿದ್ದ ಇವರು ಸದ್ಯ ಸಂಘಟನೆಯಿಂದ ಹೊರಬಂದಿದ್ದಾರೆ. ಆ ಬಳಿಕದಿಂದ ಸುನೀಲ್ ಬಜಿಲಕೇರಿ ಬಿಜೆಪಿ ನಾಯಕರ ವಿರುದ್ಧ ‌ಸದಾ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu