ಇದೀಗ ಕುಟುಂಬಸ್ಥರು ಮಕ್ಕಳಿಗೆ ನಾಮಕರಣ ಮಾಡುವ ಎಲ್ಲಾ ಸಿದ್ದತೆಯನ್ನು ನಡೆಸಿದ್ದಾರೆ.
ಸಾಂಪ್ರದಾಯಿಕ ಪದ್ಧತಿಯಂತೆ ಅವಳಿ ಮಕ್ಕಳಿಗೆ ನಾಮಕರಣ ಮಾಡಲು ಆಶೀರ್ವಾದ ಪಡೆದುಕೊಂಡು ಹೋಗಲು ಗುರುಗಳ ದರ್ಶನಕ್ಕೆ ಬಂದಿದ್ದರು.
ಗುರುಗಳಿಗೆ ವಂದಿಸಿ, ನಟಿ ಅಮೂಲ್ಯ ತಮ್ಮ ಮಕ್ಕಳಿಗೆ ನಾಮಕರಣ ಶಾಸ್ತ್ರ ಮಾಡಲು ಒಳ್ಳೆಯ ದಿನವನ್ನು ಸೂಚಿಸುವಂತೆ ಗುರುಗಳಲ್ಲಿ ಕೋರಿದ್ದಾರೆ. ಅಲ್ಲದೆ ಮಕ್ಕಳಿಗೆ ಯಾವ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನಿಡಬೇಕೆಂಬ ವಿಚಾರವಾಗಿಯೂ ಕೇಳಿ ತಿಳಿದು ಬಂದಿದ್ದಾರೆ.
ಯಾವ ದಿನದಂದು ತಮ್ಮ ಮಕ್ಕಳಿಗೆ ನಾಮಕರಣ ಮಾಡಲಿದ್ದೇವೆ ಎಂಬುದನ್ನು ನಟಿ ಅಮೂಲ್ಯ ಮತ್ತು ಅವರ ಪತಿ ಜಗದೀಶ್ ಅವರು ಅಧಿಕೃತವಾಗಿ ತಿಳಿಸಬೇಕಿದೆ.