-->
ಬಂಟ್ವಾಳ: ಲಾರಿ - ಪಿಕ್ಅಪ್ ನಡುವೆ ಭೀಕರ ಅಪಘಾತ; ಮೂವರು ಗಂಭೀರ ಗಾಯ

ಬಂಟ್ವಾಳ: ಲಾರಿ - ಪಿಕ್ಅಪ್ ನಡುವೆ ಭೀಕರ ಅಪಘಾತ; ಮೂವರು ಗಂಭೀರ ಗಾಯ

ಬಂಟ್ವಾಳ: ಲಾರಿ ಹಾಗೂ ಪಿಕಪ್ ವಾಹನಗಳ ನಡುವೆ ನಡೆದಿರುವ‌ ಭೀಕರ ಅಪಘಾತದಿಂದ ಮೂವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಪುಂಜಾಲಕಟ್ಟೆಯಲ್ಲಿ ಸೋಮವಾರ ನಡೆದಿದೆ.

ಪಾಂಡವರಕಲ್ಲು ನಿವಾಸಿಗಳಾದ ಪಿಕ್ಅಪ್ ವಾಹನ ಚಾಲಕ ಶಾಹಿಲ್, ಜತೆಯಲ್ಲಿದ್ದ ಅವಿನಾಶ್ ಹಾಗೂ ಲಾರಿ ಚಾಲಕ ಧನರಾಜ್ ಗಂಭೀರವಾಗಿ ಗಾಯಗೊಂಡವರು.

ಮಂಗಳೂರಿನಿಂದ ಧರ್ಮಸ್ಥಳದೆಡೆಗೆ ಹೋಗುತ್ತಿದ್ದ ಲಾರಿ ಪುಂಜಾಲಕಟ್ಟೆಯಿಂದ ವಗ್ಗ ಕಡೆಗೆ ಹೋಗುವ ಪಿಕ್ಅಪ್ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಪಿಕ್ಅಪ್ ವಾಹನದ ಬಿಡಿ ಭಾಗಗಳು ಚೆಲ್ಲಾಪಿಲ್ಲಿಯಾಗಿದೆ. ಅಪಘಾತ ಸಂಭವಿಸಿದ ತಕ್ಷಣ ಪುಂಜಾಲಕಟ್ಟೆ ಆಸ್ಪತ್ರೆಯ 108 ಆ್ಯಂಬುಲೆನ್ಸ್ ಚಾಲಕ ಜಗನ್ನಾಥ ಶೆಟ್ಟಿ , ಹಾಗೂ ಶ್ರೀರಾಮ ನಗರದ ಪ್ರಶಾಂತ್ ಹೆಗ್ಡೆ ಅವರು ಗಾಯಾಳುಗಳನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸುವ ಕಾರ್ಯ ಮಾಡಿದ್ದಾರೆ. 

ಅಪಘಾತ ನಡೆದ ಸ್ಥಳಕ್ಕೆ ಪುಂಜಾಲಕಟ್ಟೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100