ಮಂಗಳೂರು: ದುಬೈನಲ್ಲಿ ರಸ್ತೆ ಅಪಘಾತ; ಬೆಳ್ತಂಗಡಿಯ ಯುವಕ ಬಲಿ

ಮಂಗಳೂರು: ದುಬೈನಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಬೆಳ್ತಂಗಡಿ ತಾಲೂಕಿನ ಕುವೆಟ್ಟುವಿನ ಯುವಕನೋರ್ವನು ಮೃತಪಟ್ಟಿದ್ದಾನೆ.

ಕುವೆಟ್ಟು ಶಾಲೆಯ ಬಳಿಯ ನಿವಾಸಿ ಫ್ಲೇವಿನ್ ಅವಿನ್ ರೋಡ್ರಿಗಸ್ ರಸ್ತೆ ಅಪಘಾತದಲ್ಲಿ ಬಲಿಯಾದ ಯುವಕ.

ಕುವೆಟ್ಟು ಶಾಲೆಯ ಬಳಿಯ ನಿವಾಸಿಗಳಾದ ಮೇರಿ ಹಾಗೂ ಸಿರಿಲ್ ಪುತ್ರ ಫ್ಲೇವಿನ್ ಅವಿನ್ ರೋಡ್ರಿಗಸ್ ಅವರು ಬೆಳ್ತಂಗಡಿಯಲ್ಲಿ ಶಿಕ್ಷಣ ಪೂರೈಸಿ ದುಬೈನಲ್ಲಿ ವೃತ್ತಿ ನಿರ್ವಹಿಸುತ್ತಿದ್ದರು. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಅವರು ಸಂಚರಿಸುತ್ತಿದ್ದ ಬೈಕ್ ಅಪಘಾತಗೊಂಡಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.