ಪತ್ನಿಯ ಮಾತಿನಂತೆ ಅಂಗಡಿಗೆ ಹೋದಾತನಿಗೆ 1.55 ಲಕ್ಷ ರೂ. ಜಾಕ್ ಪಾಟ್ ಹೊಡೆಯಿತು



ವಾಷಿಂಗ್ಟನ್ : ಜೀವನದಲ್ಲಿ ಅದೃಷ್ಟ ಹೇಗೆ ಖುಲಾಯಿಸುತ್ತದೆ ಎಂದು ಹೇಳಲಸಾಧ್ಯ. ರಾತ್ರಿ ಬೆಳಗಾಗುವ ಹೊತ್ತಿಗೆ ಲಾಟರಿ ಹೊಡೆದು ಸಾಮಾನ್ಯನೊಬ್ಬ ಕೋಟ್ಯಧಿಪತಿ ಆಗುವುದನ್ನೂ ನೋಡಿದ್ದೇವೆ. ಇಲ್ಲೊಬ್ಬ ವ್ಯಕ್ತಿಯ ಕಥೆಯೂ ಹೀಗೆಯೇ ಆಗಿದೆ.ಅಮೆರಿಕಾದ ಮಿಚಿಗನ್‌ ನಿವಾಸಿ ಪ್ರೆಸ್ಟನ್ ಮಾಕಿ ಪತ್ನಿಯ ಮಾತಿನಂತೆ ಅಂಗಡಿಯಿಂದ ಕೆಲ ವಸ್ತುಗಳನ್ನು ತರಲೆಂದು ಶಾಪ್‌ ಗೆ ಹೋಗಿದ್ದಾರೆ‌. ಇಲ್ಲಿ ಅವರ ಜೀವನವನ್ನೇ ಬದಲಾಯಿಸಿದ ಘಟನೆಯೊಂದು ನಡೆದಿದೆ. ದೊಡ್ಡ ಶಾಪ್‌ ಒಂದರಲ್ಲಿ ಪ್ರೆಸ್ಟನ್ ಮಾಕಿ 5 ಲಾಟರಿ ಟಿಕೆಟ್‌ ನ್ನು ಖರೀದಿಸುತ್ತಾರೆ. ಮರುದಿನ ಬೆಳಗ್ಗೆ ಲಾಟರಿ ಟಿಕೆಟ್‌ ನಂಬರ್‌ ನ್ನು ಮೊಬೈಲ್‌ ಆ್ಯಪ್‌ ನಲ್ಲಿ ಸ್ಕ್ಯಾನ್‌ ಮಾಡಿ  ನೋಡಿದಾಗ ಅವರ 05-12-16-17-29 ನಂಬರ್‌ ವುಳ್ಳ ಎಲ್ಲಾ ಲಾಟರಿಯಲ್ಲೂ ಜಾಕ್‌ ಪಾಟ್‌ ಬಹುಮಾನವನ್ನು ಗೆದ್ದಿದ್ದಾರೆ. ಅವರು ಬರೋಬ್ಬರಿ $190,736 (1,55,71,381 ರೂ.) ಗೆದ್ದುಕೊಂಡಿದ್ದಾರೆ.ಈ ಹಣದಲ್ಲಿ ಸ್ವಲ್ಪ ಹಣವನ್ನು ಹೂಡಿಕೆ ಮಾಡುತ್ತೇನೆ. ಇನ್ನು ಸ್ವಲ್ಪ ಹಣವನ್ನು ಕುಟುಂಬದೊಂದಿಗೆ ಹಂಚಿಕೊಳ್ಳುತ್ತೇನೆ ಎನ್ನುತ್ತಾರೆ ಪ್ರೆಸ್ಟನ್ ಮಾಕಿ.