ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ದಂಪತಿ ಮೃತದೇಹವಾಗಿ ಪತ್ತೆ...!

ಉತ್ತರಪ್ರದೇಶ : ಉತ್ತರಪ್ರದೇಶದ ಬರೇಲಿಯ ಸೀಶ್‌ಘರ್‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಬ್ಬಿನ ಗದ್ದೆಯೊಂದರಲ್ಲಿ ದಂಪತಿಯ ಮೃತದೇಹ ಪತ್ತೆಯಾಗಿದೆ. ಪತ್ನಿಯ ಕತ್ತು ಸೀಳಿ ಕೊಲೆಗೈದರೆ, ಪತಿ ವಿಷ ಸೇವಿಸಿ ಸಾವಿಗೀಡಾಗಿದ್ದಾರೆ‌. 

ಸೋಹನ್‌ಲಾಲ್ (30) ಹಾಗೂ ಆತನ ಪತ್ನಿ ಕೌಸಲ್ಯಾ ದೇವಿ (30) ಮೃತದೇಹವಾಗಿ ಪತ್ತೆಯಾದ ದಂಪತಿ.

ಎಸ್‌ಪಿ ರಾಜ್‌ಕುಮಾರ್ ಅಗರ್‌ವಾಲ್ ಮಾಹಿತಿ ನೀಡಿ, ಕೌಸಲ್ಯಾ ದೇವಿಯವರ ಕತ್ತು ಸೀಳಿ ಕೊಲೆಗೈಯ್ಯಲಾಗಿದೆ. ಪತಿ ಸೋಹನ್ ಲಾಲ್ ಆಕೆಯನ್ನು ಕೊಲೆಗೈದು ಬಳಿಕ ತಾನಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ದಂಪತಿ ಜಾನುವಾರಿಗೆ ಮೇವು ತರಲೆಂದು ಜೊತೆಯಾಗಿ ಹೋಗಿದ್ದು, ಆ ಬಳಿಕ ಇಬ್ಬರೂ ಮೃತದೇಹವಾಗಿ ಪತ್ತೆಯಾಗಿದ್ದಾರೆ‌. ಈ ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. ಇಬ್ಬರ ಮೃತದೇಹವನ್ನೂ ಮರಣೋತ್ತರ ಪರೀಕ್ಷೆಗೆ ಕಳಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.