ಯುವತಿಯ ಅತ್ಯಾಚಾರ: ಯುವಕ, ಆತನ ತಾಯಿ ವಿರುದ್ಧ ಪ್ರಕರಣ ದಾಖಲು

ನಾಗುರ: ಆಮಿಷವೊಡ್ಡಿ ಹದಿಹರೆಯದ ಯುವತಿಯನ್ನು ಅತ್ಯಾಚಾರಗೈದಿರುವ ಮಧ್ಯಪ್ರದೇಶದ 22 ವರ್ಷದ ಯುವಕ ಹಾಗೂ ಮತ್ತೋರ್ವ ಪುರುಷನೊಂದಿಗೆ ಲೈಂಗಿಕಕ್ರಿಯೆ ನಡೆಸಲು ಒತ್ತಾಯಿಸಿರುವ ಆರೋಪಿಯ ತಾಯಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಭಿಷೇಕ್ ಕುರಿಲ್(22) ಹಾಗೂ ಆತನ ತಾಯಿ ರಜನಿ ( 45 ) ವಿರುದ್ಧ ಪ್ರಕರಣ ದಾಖಲಾಗಿದೆ. 

ಈವೆಂಟ್ ಮ್ಯಾನೇಜ್‌ಮೆಂಟ್ ಕಂಪೆನಿಯ ವಿಚಾರವಾಗಿ ಸಂತ್ರಸ್ತೆ ಕಳೆದ ಮೇ ತಿಂಗಳಲ್ಲಿ ಭೋಪಾಲ್‌ಗೆ ಹೋಗಿದ್ದಳು. ಆ ವೇಳೆ ಅಭಿಷೇಕ್ ಕುರಿಲ್ ಎಂಬಾತನ ಪರಿಚಯವಾಗಿತ್ತು. ಆ ಬಳಿಕ ಆತ ಯುವತಿಯೊಂದಿಗೆ ಸಲುಗೆ ಬೆಳೆಸಿ ಆಮಿಷವೊಡ್ಡಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ ಆತನ ತಾಯಿ ಮತ್ತೊಬ್ಬನೊಂದಿಗೂ ದೈಹಿಕ ಸಂಬಂಧ ಬೆಳೆಸುವಂತೆ ಒತ್ತಾಯಿಸಿದದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 

ಅಲ್ಲದೆ ಆರೋಪಿ ಅಭಿಷೇಕ್ ಕುರಿಲ್ ಯುವತಿಯ ಮೊಬೈಲ್ ಕಸಿದುಕೊಂಡು ಆಕೆಯ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅತ್ಯಾಚಾರ, ಅಪರಾಧ ಬೆದರಿಕೆ ಮತ್ತು ಇತರ ಕೃತ್ಯಗಳಿಗಾಗಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಬಂಧನಕ್ಕೆ ಪ್ರಯತ್ನ ಮುಂದುವರಿದಿದೆ ಎಂದು ಜರಿಪಾಟಕ್ ಪೊಲೀಸ್ ಠಾಣೆಯ ಅಧಿಕಾರಿಗಳು ಹೇಳಿದ್ದಾರೆ.